ನವದೆಹಲಿ:ದೇಶದಲ್ಲಿ ಮಾರಕ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು ಮೂರನೆಯ ಅಲೆಯ ಭಯ ಶುರುವಾಗಿದೆ.ಇಂದು ದೆಹಲಿಯಲ್ಲಿ ಎರಡು ಹೊಸ ಒಮಿಕ್ರಾನ್ ಪ್ರಕರಣಗಳು ಪತ್ತೆ ಆಗಿದ್ದು ಒಟ್ಟು ಪ್ರಕರಣ 24 ಕ್ಕೆ ತಲುಪಿದೆ.ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳ ಪ್ರಕಾರ, ಇದುವರೆಗೆ ಮಹಾರಾಷ್ಟ್ರ 48, ದೆಹಲಿ 24, ರಾಜಸ್ಥಾನ 17, ಕರ್ನಾಟಕ 19,ಕೇರಳ 11, ತೆಲಂಗಾಣ 8, ಗುಜರಾತ್ 5, ಆಂಧ್ರಪ್ರದೇಶ 1, ಚಂಡೀಗಢ 1, ತಮಿಳುನಾಡು 1 ಮತ್ತು ಪಶ್ಚಿಮ ಬಂಗಾಳ 1 ಪ್ರಕರಣಗಳು ವರದಿಯಾಗಿವೆ.
ದೆಹಲಿಯಲ್ಲಿ ಎರಡು ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆ 24 ಕ್ಕೆ ಏರಿದೆ ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ. ಈ 24 ರೋಗಿಗಳಲ್ಲಿ 12 ಮಂದಿ ಬಿಡುಗಡೆಯಾಗಿದ್ದು, 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದೇ ವೇಳೆ ಓಮಿಕ್ರಾನ್ ಹರಡುವಿಕೆಯು ಸಮುದಾಯ ಪ್ರಸರಣವಿರುವ ಡೆಲ್ಟಾ ರೂಪಾಂತರವನ್ನು ಮೀರಿಸುತ್ತದೆ ಎಂದು ಕೇಂದ್ರವು ಎಚ್ಚರಿಸಿದೆ.