News Karnataka Kannada
Sunday, May 19 2024
ದೇಶ

ಇಂದಿನಿಂದ ಜ್ಞಾನವಾಪಿ ಮಸೀದಿ ಸರ್ವೇ ಪುನರಾರಂಭ

gyanvapi
Photo Credit : News Kannada

ಅಲಹಾಬಾದ್: ಇಡೀ ದೇಶದ ಗಮನ ಸೆಳೆದಿರುವ ಜ್ಞಾನವಾಪಿ ಗದ್ದಲದಲ್ಲಿ ಹಿಂದೂ ಪರ ಹೋರಾಟಗಾರರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಜ್ಞಾನವಾಪಿ ಆವರಣದಲ್ಲಿ ವೈಜ್ಞಾನಿಕ ಸರ್ವೇಗೆ ಒಪ್ಪಿಗೆ ನೀಡಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಅಲಹಾಬಾದ್​ ಹೈಕೋರ್ಟ್​ ಎತ್ತಿ ಹಿಡಿದಿದ್ದು ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸಿದೆ. ಇಂದಿಯಿಂದ ವೈಜ್ಞಾನಿಕ ಸಮೀಕ್ಷೆಗೆ ಗ್ರೀನ್​ಸಿಗ್ನಲ್​ ನೀಡಿದೆ.

ಜ್ಞಾನವಾಪಿ ದೇಗುಲವೋ, ಮಸೀದಿಯೋ ಎಂಬುದನ್ನು ತಿಳಿಯಲು ವಾರಾಣಸಿ ಜಿಲ್ಲಾ ನ್ಯಾಯಾಲಯ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿತ್ತು. ಆದ್ರೆ, ವಾರಣಾಸಿ ಕೋರ್ಟ್ ನೀಡಿದ್ದ ಸರ್ವೇ ಆದೇಶವನ್ನು ಪ್ರಶ್ನಿಸಿ ಮಸೀದಿ ಪರ ಸಮಿತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ವಾರಾಣಸಿ ಕೋರ್ಟ್​ನ ಆದೇಶ ಎತ್ತಿಹಿಡಿದ ಹೈಕೋರ್ಟ್​ ಜ್ಞಾನವಾಪಿ ಆವರಣದಲ್ಲಿ ಸಮೀಕ್ಷೆಗೆ ಗ್ರೀನ್​ಸಿಗ್ನಲ್​ ನೀಡಿದೆ.

ಜ್ಞಾನವಾಪಿ ಆವರಣದಲ್ಲಿ ASI ಸಮೀಕ್ಷೆ ಮುಂದುವರಿಯುತ್ತದೆ. ಯಾವುದೇ ಅಗೆಯುವಿಕೆ ಅಥವಾ ಹಾನಿ ಮಾಡಬಾರದು ಎಂದು ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಹಾಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ವೈಜ್ಞಾನಿಕ ಸರ್ವೇ ಅಗತ್ಯವೆಂದು ಹೈಕೋರ್ಟ್​ ಅಭಿಪ್ರಾಯ ವ್ಯಕ್ತಪಡಿಸಿ, ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ, ಸಮೀಕ್ಷೆಗೆ ಗ್ರೀನ್​ಸಿಗ್ನಲ್​ ನೀಡಿದೆ.

ಕೂಡಲೇ ವೈಜ್ಞಾನಿಕ ಸಮೀಕ್ಷೆ ಆರಂಭಿಸಬಹುದೆಂದು ಅಲಹಾಬಾದ್ ಹೈಕೋರ್ಟ್​ ಹೇಳಿದೆ. ಇದರ ಬೆನ್ನಲ್ಲೇ ಇಂದು ಬೆಳಗ್ಗೆ ಜ್ಞಾನವಾಪಿ ಆವರಣದಲ್ಲಿ ಸಮೀಕ್ಷ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಉತ್ತರ ಪ್ರದೇಶದ ಡಿಸಿಎಂ ಕೇಶವ ಪ್ರಸಾದ್ ಮೌರ್ಯ, ನಾನು ಈ ತೀರ್ಪನ್ನು ಸ್ವಾಗತಿಸುತ್ತೇನೆ. ಸತ್ಯ ಹೊರಬರುವ ವಿಶ್ವಾಸವಿದೆ ಎಂದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು