News Karnataka Kannada
Monday, May 06 2024
ದೇಶ

ಸಾವು-ಬದುಕಿನ ಹೋರಾಟದಲ್ಲೂ ಚಟ ಬಿಡದ ಭೂಪ; ಐಸಿಯುನಲ್ಲೂ ವ್ಯಸನದ ಗುಂಗು

ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಕೈಗಳಿಂದ ಗುಟ್ಕಾ ತಿಕ್ಕುತ್ತಿದ್ದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Photo Credit : News Kannada

ಕಾನ್ಪುರ: ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಕೈಗಳಿಂದ ಗುಟ್ಕಾ ತಿಕ್ಕುತ್ತಿದ್ದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಎಕ್ಸ್‌ ನಲ್ಲಿ ಅನಾಮಿಕನೊಬ್ಬ ಹಂಚಿಕೊಂಡ ವೀಡಿಯೋದಲ್ಲಿ ಆಮ್ಲಜನಕ ಮಾಸ್ಕ್‌ ಹಾಕಿಕೊಂಡ ವ್ಯಕ್ತಿಯೊಬ್ಬ ತನ್ನ ಎರಡೂ ಕೈಗಳನ್ನು ಗುಟ್ಕಾ ತಯಾರಿಸುವಂತೆ ತಿಕ್ಕುತ್ತಿದ್ದು, ನರ್ಸ್‌ಗಳು ಬಳಿಯಲ್ಲೇ ಇರುವುದನ್ನು ಕಾಣಬಹುದಾಗಿದೆ.

ಘಟನೆ ನಡೆದಿರುವುದು ಕಾನ್ಪುರದಲ್ಲಿ ಎಂದು ವೀಡಿಯೋದಲ್ಲಿ ಬರೆಯಲಾಗಿದೆಯಾದರೂ ಚಿತ್ರೀಕರಿಸಿದವರ ಹಾಗು ಆಸ್ಪತ್ರೆಯ ಗುರುತು ಬಹಿರಂಗವಾಗದ ಕಾರಣ ಘಟನೆ ನಡೆದ ಸ್ಥಳದ ಬಗ್ಗೆ ಸ್ಪಷ್ಟತೆ ಇಲ್ಲ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತರಹೇವಾರಿ ಕಾಮೆಂಟುಗಳನ್ನು ಆಕರ್ಶಿಸುತ್ತಿದೆ. ಕೆಲವರು ಚಟದ ತೀವ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರೆ, ಕೆಲವರು ವೈದ್ಯರ ನಿರ್ಲಕ್ಷತನದ ಬಗ್ಗೆ ಸಿಡಿಮಿಡಿಗೊಂಡು ಅವರ ಜವಾಬ್ದಾರಿಯನ್ನು ಪ್ರಶ್ನಿಸುತ್ತಿದ್ದಾರೆ.

ಅರವಳಿಕೆ ಪ್ರಭಾವಕ್ಕೆ ಒಳಗಾದವನಂತೆ ಕಾಣುವಾತ ಆ ಸ್ಥಿತಿಯಲ್ಲೂ ಗುಟ್ಕಾ ತಯಾರಿಸುವಂತೆ ಕೈ ಆಡಿಸುವುದು ಚಟದ ಪ್ರಭಾವವನ್ನು ತೋರಿಸುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು