ಅಹಮದಾಬಾದ್: ಗುಜರಾತಿಗಳ ಸಾಂಪ್ರದಾಯಿಕ ನೃತ್ಯ ಗಾರ್ಬಾ ನೃತ್ಯ ಯುನೆಸ್ಕೊ ಪಟ್ಟಿ ಸೇರಿದೆ. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರು ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನವರಾತ್ರಿ ಸಮಯದಲ್ಲಿ ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗಾರ್ಬಾ ನೃತ್ಯ ಮಾಡಲಾಗುತ್ತದೆ. ಹಳೆಯ ಪದ್ಧತಿ ಪ್ರಕಾರ ದೇವಿಯು ಗಾರ್ಬಾ ರೂಪದಲ್ಲಿ ಜೀವಂತವಾಗಿರುತ್ತಾರೆ ಎಂದು ನಂಬಲಾಗಿದೆ. ಈ ಪದ್ಧತಿಯನ್ನು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಗುರುತಿಸಿ ಯುನೆಸ್ಕೊ ಪ್ರಾತಿನಿಧಿಕ ಪಟ್ಟಿಗೆ ಸೇರಿಸಲಾಗಿದೆ ಎಂದು ಪಟೇಲ್ ಹೇಳಿದ್ದಾರೆ.
ಗಾರ್ಬಾ ನೃತ್ಯ ಸಾಂಪ್ರದಾಯಿಕ ಮತ್ತು ದೈವೀಕ ನೃತ್ಯ, ದೇವಿಯ ಶಕ್ತಿಯನ್ನು ಪ್ರತಿನಿಧಿಸುವ ಈ ನೃತ್ಯವನ್ನು ನವರಾತ್ರಿ ಸಮಯದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಯುನೆಸ್ಕೊ ವೆಬ್ಸೈಟ್ನಲ್ಲಿ ಹೇಳಲಾಗಿದೆ. ಬೋಟ್ಸ್ವಾನದ ಕಸಾನೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
🔴 BREAKING
New inscription on the #IntangibleHeritage List: Garba of Gujarat, #India 🇮🇳.
Congratulations!https://t.co/c2HMPpStCA #LivingHeritage pic.twitter.com/YcupgYLFjg
— UNESCO 🏛️ #Education #Sciences #Culture 🇺🇳 (@UNESCO) December 6, 2023