News Karnataka Kannada
Friday, May 03 2024
ಗುಜರಾತ್

ಕೋತಿಗಳಿಂದ ಬಾಲಕನ ಹತ್ಯೆ: ಪುಟ್ಟ ಬಾಲಕನ ಮೇಲೆರಗಿ ಕರುಳು ಬಗೆದ ಕೋತಿ

ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ ವೃದ್ಧ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ.
Photo Credit : Wikimedia

ಗಾಂಧಿನಗರ: ಇತ್ತೀಚೆಗೆ ವನ್ಯಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮೊದಲೆಲ್ಲ ಮನುಷ್ಯರನ್ನು ಕಂಡರೆ ಹೆದರಿ ದೂರ ಓಡುತ್ತಿದ್ದ ವನ್ಯಜೀವಿಗಳು ಇದೀಗ ಆಕ್ರಮಣ ಮಾಡುವಷ್ಟು ಮಟ್ಟಕ್ಕೆ ಬೆಳೆದಿವೆ. ಮೊನ್ನೆ ಮೊನ್ನೆಯಷ್ಟೇ ರಾಜ್ಯದ ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬರು ಕೋತಿ ದಾಳಿಗೆ ಬಲಿಯಾಗಿದ್ದರು.

ಇದೀಗ ಗುಜರಾತ್‌ ನಲ್ಲಿ  ಹತ್ತು ವರ್ಷದ ಬಾಲಕನನ್ನು ಕೋತಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೋತಿಯೊಂದು ಬಾಲಕನನ್ನು ಹತ್ಯೆ ಮಾಡಿ ಕರುಳನ್ನು ಬಗೆದು ಹೊರ ತೆಗೆದಿದೆ. ಗುಜರಾತ್‌ನ ಗಾಂಧಿನಗರದ ಸಾಲ್ಕಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ದೆಹಗಾಂ ತಾಲೂಕಿನ ದೇವಸ್ಥಾನದ ಬಳಿ ಕೋತಿಗಳು ದಾಳಿ ನಡೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೋತಿ ದಾಳಿಗೆ ಬಲಿಯಾದ ಬಾಲಕನನ್ನು ದೀಪಕ್ ಠಾಕೂರ್ ಎಂದು ಪೊಲೀಸರು ಗುರುತಿಸಿದ್ದಾರೆ.

ನಂತರ ಮಂಗಗಳು ಬಾಲಕನ ಮೇಲೆ ಹಾರಿದ್ದವು, ಬಳಿಕ ಉಗುರಿನಿಂದ ಪರಚಿವೆ, ಬಳಿಕ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದಿದ್ದವು. ಒಂದು ವಾರದಲ್ಲಿ ಗ್ರಾಮದಲ್ಲಿ ಕೋತಿಗಳು ನಡೆಸಿದ ಮೂರನೇ ದಾಳಿ ಇದಾಗಿದೆ ಎಂದು ಅರಣ್ಯಾಧಿಕಾರಿ ವಿಶಾಲ್ ಚೌಧರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು