ಅಹ್ಮದಾಬಾದ್: ಗುಜರಾತ್ ನ ಹಥಿಜನ್ ಬಳಿಯ ವಿವೇಕಾನಂದನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಬಡಿಸುವಾಗ ಮಧ್ಯವಯಸ್ಕ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 6 ರಂದು ಈ ಘಟನೆ ನಡೆದಿದೆ ಎಂದು ಶಾಲಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ವ್ಯಾಪ್ತಿಯ ಶಾಲಾ ಮಂಡಳಿಯ ಆಡಳಿತಾಧಿಕಾರಿ ಲಗ್ಧೀರ್ ದೇಸಾಯಿ ಅವರು ವಿವೇಕಾನಂದನಗರ ಗುಜರಾತಿ ಶಾಲೆ ಸಂಖ್ಯೆ 1 ರಲ್ಲಿ ಶಾಲಾ ಸಹಾಯಕಿ ಸುಮಿತ್ರಾ ದಭಿ ಇದ್ದಿರುವುದಾಗಿ ಘಟನೆಯ ಬಗ್ಗೆ ತಿಳಿಸಿದರು.
ಇನ್ನು ಇತ್ತೀಚೆಗೆ, ಅ.4 ರಂದು, ಸೂರತ್ನಲ್ಲಿ ಗರ್ಬಾ ಅಭ್ಯಾಸದಲ್ಲಿ ಭಾಗವಹಿಸುವಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದರು.