ಗುಜರಾತ್ : ಗುಜರಾತ್ ಸರ್ಕಾರವು ಎಂಟು ಪ್ರಮುಖ ನಗರಗಳಲ್ಲಿ ನೈಟ್ ಕರ್ಫ್ಯೂವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ಅಹಮದಾಬಾದ್, ರಾಜ್ ಕೋಟ್, ಸೂರತ್, ವಡೋದರಾ, ಜಾಮ್ ನಗರ್, ಭಾವನಗರ್, ಗಾಂಧಿನಗರ ಮತ್ತು ಜುನಾಗಢದಲ್ಲಿ ನೈಟ್ ಕರ್ಫ್ಯೂ ವಿಸ್ತರಿಸಲಾಗಿದೆ.
ಕೋವಿಡ್-19 ನ ಒಮೈಕ್ರಾನ್ ರೂಪಾಂತರದ ಭೀತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಭಾನುವಾರ ರಾಜ್ಯದಲ್ಲಿ ಒಮೈಕ್ರಾನ್ ರೂಪಾಂತರದ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 11 ಕೇಸ್ ಪತ್ತೆಯಾಗಿದೆ.