News Karnataka Kannada
Friday, May 03 2024
ಗುಜರಾತ್

ಗುಜರಾತ್‌ನ ಮಟರ್‌ ತಾಲೂಕಿನಲ್ಲಿ ಕ್ಲೋರಿನ್ ಸೋರಿಕೆಯಿಂದ 15 ಮಂದಿ ಅಸ್ವಸ್ಥ

Breaking News
Photo Credit :

ಗುಜರಾತ್‌: ಗುಜರಾತ್‌ನ ಖೇಡಾ ಜಿಲ್ಲೆಯ ಮಟರ್‌ ತಾಲೂಕಿನಲ್ಲಿರುವ ಅನಿಲ ಘಟಕವೊಂದರಲ್ಲಿ ಕ್ಲೋರಿನ್ ಸೋರಿಕೆಯುಂಟಾದ ಕಾರಣ ಮಕ್ಕಳೂ ಸೇರಿದಂತೆ 15 ಮಂದಿ ಅಸ್ವಸ್ಥರಾಗಿದ್ದಾರೆ.

ಇಲ್ಲಿನ ಖೇಡಾ-ತಾರಾಪುರ ಹೆದ್ದಾರಿಯಲ್ಲಿ, ಪಾಯ್ರೇಜ್ ಗ್ರಾಮದ ಹೊರವಲದಲ್ಲಿರುವ ನೀರು ಸರಬರಾಜು ಇಲಾಖೆಯ 16 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕದಲ್ಲಿ ಸೋರಿಕೆಯ ಅನಾಹುತ ಸಂಭವಿಸಿದೆ.ಘಟನೆಯಲ್ಲಿ ಏಳು ಮಹಿಳೆಯರು, ಮೂವರು ಮಕ್ಕಳು ಮತ್ತು ಐದು ಪುರುಷರು ಅಸ್ವಸ್ಥರಾಗಿದ್ದರು.

ಅನಿಲ ಘಟಕದ ಬಳಿ ವಾಸಿಸುತ್ತಿದ್ದವರೇ ಕ್ಲೋರಿನ್ ಸೋರಿಕೆಯಿಂದ ಅಸ್ವಸ್ಥರಾಗಿದ್ದು ಅವರನ್ನೆಲ್ಲಾ ಹತ್ತಿರದ ತಾರಾಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲ ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದಾರೆ.

 

ತಕ್ಷಣವೇ ಸೋರಿಕೆ ಸ್ಥಳಕ್ಕೆ ಆಗಮಿಸಿದ ನದಿಯಾಡ್ ಪಟ್ಟಣದ ಅಗ್ನಿಶಾಮಕ ದಳದ ಸಿಬ್ಬಂದಿ ಸೋರಿಕೆಯಾದ ಸಿಲಿಂಡರ್‌ಗಳ ಮೇಲೆ ನೀರು ಚಿಮ್ಮಿಸುವ ಮೂಲಕ ಸೋರಿಕೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು