ಮೈಸೂರು: ವ್ಯಕ್ತಿಯೊರ್ವರ ಖಾಸಗಿ ಫಾರ್ಮ್ನ ಕೆಲಸಕ್ಕಿದ್ದ ಕುಟುಂಬದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಟಿ.ನರಸೀಪುರ ಠಾಣಾ ವ್ಯಾಪ್ತಿಯ ಫಾರ್ಮ್ಹೌಸ್ನಲ್ಲಿ ಘಟನೆ ನಡೆದಿದ್ದು ಅತ್ಯಾಚಾರದ ಆರೋಪಿ ಬಿಹಾರ ಮೂಲದ ನಜೀಮ್ನನ್ನು ಬಂಧಿಸಲಾಗಿದೆ.
ಲೈಂಗಿಕ ದೌರ್ಜನ್ಯ ಎಂದು ಅಪ್ರಾಪ್ತ ಬಾಲಕಿಯ ತಾಯಿ ನೀಡಿದ್ದ ದೂರು ಆಧರಿಸಿ ಪೋಕ್ಸೊ ಕಾಯ್ದೆಯಡಿ ಸೆಪ್ಟೆಂಬರ್ 13ರಂದೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಂಧಿತ ಆರೋಪಿ ಫಾರ್ಮ್ಹೌಸ್ನಲ್ಲಿ ಸಾಕುಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.