News Karnataka Kannada
Wednesday, May 01 2024
ತೆಲುಗು

ಟಾಲಿವುಡ್ ನಟ ಸಾಯಿ ಧರಮ್​ ತೇಜ್​ ಅವರ ಅರೋಗ್ಯ ಸ್ಥಿತಿ ಅಪ್​ಡೇಟ್​

Sai Dharam Tej 11092021
Photo Credit :

ಟಾಲಿವುಡ್ ನಟ ಸಾಯಿ ಧರಮ್​ ತೇಜ್​ ಅವರು ಬೈಕ್​ ಅಪಘಾತಕ್ಕೆ ಒಳಗಾಗಿ ತಿಂಗಳಾಗುತ್ತಾ ಬಂದಿದೆ. ಸದ್ಯ ಅವರ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಅಭಿಮಾನಿಗಳು ಅಪ್​ಡೇಟ್​ ಕೇಳುತ್ತಿದ್ದು, ಆ ಕುರಿತು ಈಗ ಸಾಯಿ ಧರಮ್​ ಅವರೇ ಉತ್ತರ ನೀಡಿದ್ದಾರೆ.

ಸಾಯಿ ಧರಮ್​ ತೇಜ್​ ಅವರ ಸ್ಥಿತಿ ಈಗ ಕೊಂಚ ಚೇತರಿಕೆ ಕಂಡಿದೆ. ಇಷ್ಟು ದಿನ ಕೋಮದಲ್ಲಿದ್ದ ಅವರು ಚೇತರಿಸಿಕೊಂಡಿದ್ದಾರೆ. ಟ್ವಿಟರ್​ ಥಂಬ್​​ ಅಪ್​ ಮಾಡಿರುವ ಫೋಟೋವನ್ನು ಹಾಕಿದ್ದಾರೆ.

‘ನನ್ನ ಮೇಲೆ ಮತ್ತು ನನ್ನ ಸಿನಿಮಾ ‘ರಿಪಬ್ಲಿಕ್’ ಮೇಲೆ ನೀವು ತೋರಿಸಿದ ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಧನ್ಯವಾದ ಎಂಬುದು ಸಣ್ಣ ಪದ, ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ’ ಎಂದು ಅವರು ಬರೆದಿದ್ದಾರೆ.

ಸಾಯಿ ಧರಮ್​ ತೇಜ್​ ಅವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ಇತ್ತೀಚೆಗೆ ಅವರ ಮಾವ ಪವನ್​ ಕಲ್ಯಾಣ್​ ಅವರು ಮಾಹಿತಿ ಹಂಚಿಕೊಂಡಿದ್ದರು.

ಹೈದರಾಬಾದ್​ನಲ್ಲಿ ಸೆ.10ರಂದು ಸ್ಪೋರ್ಟ್ಸ್​ ಬೈಕ್​ನಲ್ಲಿ ಚಲಿಸುತ್ತಿದ್ದ ಅವರು ಅಪಘಾತಕ್ಕೆ ಒಳಗಾದ ಬಳಿಕ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು