News Karnataka Kannada
Monday, May 06 2024
ಗೋವಾ

ಮೂವರು ಅಮಾಯಕರ ಪ್ರಾಣತೆಗೆದ ಫ್ರೆಂಡ್‌ಶಿಪ್‌ ಡೇ ಪಾರ್ಟಿ: ಐಷಾರಾಮಿ ಕಾರಿನಲ್ಲಿ ನಡೆದಿದ್ದೇನು?

Industrialist's suicide case: Main accused arrested
Photo Credit : News Kannada

ಪಣಜಿ: ಫ್ರೆಂಡ್‌ ಶಿಪ್‌ ಡೇಯಲ್ಲಿ ವಿಪರೀತ ಮದ್ಯಪಾನ ಮಾಡಿ ಯದ್ವಾತದ್ವ ಐಷಾರಾಮಿ ಕಾರು ಓಡಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಗೋವಾದಲ್ಲಿ ನಡೆದಿದೆ.

ಭಾನುವಾರ ರಾತ್ರಿ ಘಟನೆ ನಡೆದಿದ್ದು, ಮದ್ಯಪಾನ ಮಾಡಿ ಮೂವರ ಸಾವಿಗೆ ಕಾರಣವಾದ ಆರೋಪದ ಮೇಲೆ ಕಾರು ಚಾಲಕ ಪರೇಶ್ ಸಿನಾಯ್ ಸಾವರ್ಡೇಕರ್ (48) ನನ್ನು ಬಂಧಿಸಲಾಗಿದೆ.

ಏನಾಯ್ತು ಭಾನುವಾರ ತಡರಾತ್ರಿ: ಪೊಂಡಾ ತಾಲೂಕಿನ ಬನಸ್ತಾರಿ ಸೇತುವೆಯ ಮೇಲೆ ಪಣಜಿ ಕಡೆಗೆ ಹೋಗುತ್ತಿದ್ದ Mercedes GLS SUV ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮೂರು ಕಾರುಗಳು ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಗಾಯಾಳುಗಳನ್ನು ಗೋವಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಮೃತರಲ್ಲಿ ಪಾದಚಾರಿ ಕೂಡ ಸೇರಿದ್ದಾರೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಮರ್ಸಿಡಿಸ್‌ ಕಾರಿನಲ್ಲಿದ್ದವರು ಫ್ರೆಂಡ್‌ ಶಿಪ್‌ ಡೇ ಪಾರ್ಟಿ ಮುಗಿಸಿ ವಾಪಸಾಗುತ್ತಿದ್ದರು ಎಂದು ತಿಳಿದುಬಂದಿದೆ.

ಅಪಘಾತದ ನಂತರ, ಪೊಲೀಸರು ಈ ವಾಹನದ ಇತಿಹಾಸವನ್ನು ಪರಿಶೀಲಿಸಿದಾಗ, ಅತಿವೇಗದ ಚಾಲನೆಗಾಗಿ ಈ ಹೈ-ಎಂಡ್ ಎಸ್‌ಯುವಿಗೆಈ ಹಿಂದೆ ನಾಲ್ಕು ಬಾರಿ ದಂಡ ವಿಧಿಸಲಾಗಿತ್ತು ಎಂದು ಪೊಲೀಸ್ ಅಧೀಕ್ಷಕ (ಟ್ರಾಫಿಕ್) ಬೋಸ್ಯುಟ್ ಸಿಲ್ವಾ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು