ಹರ್ಯಾಣ: ರೇವಾರಿ ಜಿಲ್ಲೆಯ ರಾಲಿಯಾವಾಸ್ ಗ್ರಾಮದ ಬಳಿ ನ್ಯಾಪ್ಕಿನ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಯಾವುದೇ ಸಾವುನೋವುಗಳು ಸಂಭವಿಸಿಲ್ಲ.
ಮಧ್ಯರಾತ್ರಿ ನಮಗೆ ಕರೆ ಬಂದಿತ್ತು, ತಕ್ಷಣ ನಾನಾ ಕಡೆಗಳಿಂದ ಒಟ್ಟು 18 ಅಗ್ನಿಶಾಮಕ ದಳದ ವಾಹನಗಳನ್ನು ಕರೆಸಿದ್ದೇವೆ, ಬೆಂಕಿ ನಂದಿಸುವ ಯತ್ನ ಮುಂದುವರೆದಿದೆ ಎಂದು ಕಸೋಲಾ ಪೊಲೀಸ್ ಠಾಣೆಯ ಎಎಸ್ಐ ಧರಂವೀರ್ ಯಾದವ್ ತಿಳಿಸಿದ್ದಾರೆ.