ನವದೆಹಲಿ: ಭಾರತದ ಅಗ್ರಗಣ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹೀರೋ ಮೋಟೋಕಾರ್ಪ್ನ ಸಿಎಂಡಿ ಪವನ್ ಮುಂಜಲ್ ಅವರ ಕೆಲ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ಸುದ್ದಿ ವರದಿಯಾಗಿದೆ. ವಿವಿಧ ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ, ಪಿಎಂಎಲ್ಎ ಅಡಿಯಲ್ಲಿ ಮುಂಜಲ್ ಅವರ 24.95 ಕೋಟಿ ರೂ ಮೌಲ್ಯದ ಒಟ್ಟು 3 ಚಿರಾಸ್ತಿಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಆಸ್ತಿಗಳು ದೆಹಲಿಯಲ್ಲಿವೆ.
ವಿದೇಶೀ ವಿನಿಮಯ ಹಣವನ್ನು ದೇಶದಿಂದ ಅಕ್ರಮವಾಗಿ ಹೊರಗೆ ಸಾಗಿಸಿದ ಆರೋಪ ಪ್ರವೀಣ್ ಮುಂಜಲ್ ಸೇರಿದಂತೆ ವಿವಿಧ ಮಂದಿ ಮೇಲಿದೆ. ರೆವಿನ್ಯೂ ಇಂಟೆಲಿಜೆನ್ಸ್ ಡೈರೆಕ್ಟೋರೇಟ್ (ಡಿಆರ್ಐ) ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದ್ದು, ಜಾರಿ ನಿರ್ದೇಶನಾಲಯವು ಇದರ ತನಿಖೆ ನಡೆಸುತ್ತಿದೆ.