News Karnataka Kannada
Friday, May 17 2024
ದೇಶ

ದೆಹಲಿಯ ಸಫೀನಾ ಹುಸೇನ್‌ಗೆ ₹ 4.16 ಕೋಟಿಯ ‘ವೈಸ್‌’ ಪ್ರಶಸ್ತಿ ಗರಿ

'ಎಜುಕೇಟ್ ಗರ್ಲ್ಸ್' ಸಂಸ್ಥೆಯ ಸ್ಥಾಪಕಿ ದೆಹಲಿಯ ಸಫೀನಾ ಹುಸೇನ್‌ರಿಗೆ, ಪ್ರತಿಷ್ಠಿತ 'ವೈಸ್‌' (ವರ್ಲ್ಡ್‌ ಇನ್ನೊವೇಷನ್‌ ಸಮ್ಮಿಟ್‌ ಫಾರ್ ಎಜುಕೇಷನ್) ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ ₹ 4.16 ಕೋಟಿ (5 ಲಕ್ಷ ಡಾಲರ್) ಆಗಿದೆ.
Photo Credit : News Kannada

ನವದೆಹಲಿ: ‘ಎಜುಕೇಟ್ ಗರ್ಲ್ಸ್’ ಸಂಸ್ಥೆಯ ಸ್ಥಾಪಕಿ ದೆಹಲಿಯ ಸಫೀನಾ ಹುಸೇನ್‌ರಿಗೆ, ಪ್ರತಿಷ್ಠಿತ ‘ವೈಸ್‌’ (ವರ್ಲ್ಡ್‌ ಇನ್ನೊವೇಷನ್‌ ಸಮ್ಮಿಟ್‌ ಫಾರ್ ಎಜುಕೇಷನ್) ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ ₹ 4.16 ಕೋಟಿ (5 ಲಕ್ಷ ಡಾಲರ್) ಆಗಿದೆ.

ಭಾರತದ ವಿವಿಧ ಗ್ರಾಮಗಳಲ್ಲಿ ಶಾಲೆಯಿಂದ ಹೊರಗುಳಿದಿದ್ದ ಸುಮಾರು 14 ಲಕ್ಷ ಬಾಲಕಿಯರನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದರಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕತಾರ್‌ ಫೌಂಡೇಷನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಕೆಲ ದಿನಗಳ ಹಿಂದೆ ದೋಹಾದಲ್ಲಿ ನಡೆದಿದ್ದ ‘ವೈಸ್‌’ನ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಫೀನಾ ಈ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಭಾರತೀಯರು. ಹಿಂದೆ, ನಿರ್ಲಕ್ಷ್ಯಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಕಾರ್ಯಕ್ರಮಕ್ಕಾಗಿ ‘ಪ್ರಥಮ್‌’ ಸಹ ಸ್ಥಾಪಕ ಮಾಧವ್‌ ಚವಾಣ್‌ 2012ರಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದರು.

’16 ವರ್ಷಗಳ ಹಿಂದೆ ‘ಎಜುಕೇಟ್‌ ಗರ್ಲ್ಸ್‌’ ಸಂಸ್ಥೆ ಸ್ಥಾಪಿಸಿದೆ. ಆಗಿನ್ನೂ ‘ಬೇಟಿ ಬಚಾವೊ, ಬೇಟಿ ಪಡಾವೊ’ ಇರಲಿಲ್ಲ. ಶಿಕ್ಷಣ ವಂಚಿತ ಬಾಲಕಿಯರನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದೇ ಉದ್ದೇಶವಾಗಿತ್ತು’ ಎಂದು ಸಫೀನಾ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು