ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇತ್ತೀಚೆಗೆ ಚೀನಾ ಮೂಲದ ಸ್ಮಾರ್ಟ್ಫೋನ್ ತಯಾರಕ ವಿವೋದ ಇಬ್ಬರು ಚೀನಾದ ಉದ್ಯೋಗಿಗಳನ್ನು ಬಂಧಿಸಿತ್ತು.
ಅಲ್ಲದೆ ಬಂಧಿತರಿಗೆ ಬೀಜಿಂಗ್ ಕಾನ್ಸುಲರ್ ಸಹಾಯ ಮಾಡಲಿದೆ ಎಂದು ಭರವಸೆ ನೀಡಿದೆ. ಚೀನಾದ ಕಂಪನಿಗಳ ವಿರುದ್ಧ ತಾರತಮ್ಯ ಮಾಡದಂತೆ ಭಾರತವನ್ನು ಮನವಿ ಮಾಡುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ. ನಾವು ವಿಷಯವನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಚೀನಾ ಸರ್ಕಾರವು ಚೀನೀ ಕಂಪನಿಗಳನ್ನು ತಮ್ಮ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 23 ರಂದು, ವಿವೋ-ಇಂಡಿಯಾದ ಹಂಗಾಮಿ ಸಿಇಒ ಹಾಂಗ್ ಕ್ಸುಕ್ವಾನ್ ಅಲಿಯಾಸ್ ಟೆರ್ರಿ ಸೇರಿದಂತೆ ಮೂವರು ಕಾರ್ಯನಿರ್ವಾಹಕರನ್ನು ಇ.ಡಿ. ಬಂಧಿಸಿತ್ತು. ಈ ಪೈಕಿ ಹಾಂಗ್ ಕ್ಸುಕ್ವಾನ್ ಚೀನಾದ ಪ್ರಜೆಯಾಗಿದ್ದು, ಮುಖ್ಯ ಹಣಕಾಸು ಅಧಿಕಾರಿ ಹರಿಂದರ್ ದಹಿಯಾ ಮತ್ತು ಸಲಹೆಗಾರ ಹೇಮಂತ್ ಮುಂಜಾಲ್ ಭಾರತೀಯರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ. ಹಾಗೂ, ಆರೋಪಿಗಳು ಸದ್ಯ ಇಡಿ ಕಸ್ಟಡಿಯಲ್ಲಿದ್ದಾರೆ.