News Karnataka Kannada
Monday, May 06 2024
ದೆಹಲಿ

ನೀವ್ಯಾಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆಗೆ ರಾಹುಲ್‌ ಹೇಳಿದ್ದೇನು: ವಿಡಿಯೋ ನೋಡಿ

What Rahul gandhi said when asked why he was not married: Watch video
Photo Credit : News Kannada

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ಲಡಾಖ್‌ ಪ್ರವಾಸ ಕೈಗೊಂಡಿದ್ದು ಅದರ ವಿಡಿಯೋವನ್ನು ಜಾಲತಾಣದಲ್ಲಿ ಶೇರ್‌ ಮಾಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನೂ ಮದುವೆಯಾಗದಿರುವುದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ, ವಯಸ್ಸು 53 ಆದರೂ ಇನ್ನು ಮದುವೆಯಾಗದೆ ಬ್ರಹ್ಮಚಾರಿಯಾಗಿ ಉಳಿದಿರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ. ಗಾಂಧಿಯವರ ಸಂವಾದದ ವೀಡಿಯೊವನ್ನು ಮಂಗಳವಾರ ಅವರ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ.

ನೀವು ತುಂಬಾ ಸ್ಮಾರ್ಟ್ ಹಾಗೂ ಗುಡ್ ಲುಕಿಂಗ್’ ಇದ್ದರೂ ಯಾಕೆ ಇನ್ನೂ ಮದುವೆ ಬಗ್ಗೆ ಯೋಚಿಸಿಲ್ಲ? ಅಂತಾ ಯುವತಿಯೊಬ್ಬಳು ಕೇಳುತ್ತಾಳೆ. ಆಗ ತಕ್ಷಣವೇ ಉತ್ತರಿಸಿದ ರಾಹುಲ್ ಗಾಂಧಿ, ನನ್ನ ಕೆಲಸ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿದ್ದೇನೆ. ಹಾಗಾಗಿ ಮದುವೆಯಾಗಿಲ್ಲ ಎನ್ನುತ್ತಾರೆ.

ರಾಹುಲ್ ಅವರ ನೆಚ್ಚಿನ ತಿನಿಸುಗಳ ಬಗ್ಗೆ ಕೇಳಿದಾಗ, ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಹೊರತುಪಡಿಸಿ ಎಲ್ಲವನ್ನೂ ಚೆನ್ನಾಗಿ ತಿನ್ನುತ್ತೇನೆ. ನಾನು ಯಾವಾಗಲೂ ಹೊಸ ಸ್ಥಳಗಳನ್ನು ನೋಡಲು ಇಷ್ಟಪಡುತ್ತೇನೆ ಎಂದು ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗುತ್ತಾರೆ. ಮುಖದ ಸೌಂದರ್ಯ ಕಾಪಾಡಲು ಏನನ್ನು ಹಚ್ಚುತ್ತಿರಾ? ಎಂದು ಮತ್ತೊಬ್ಬರು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ರಾಹುಲ್, ಯಾವುದೇ ಕ್ರಿಮ್ ಅಥವಾ ಸೋಪ್ ಬಳಸುವುದಿಲ್ಲ. ನೀರಿನಿಂದ ಮಾತ್ರ ತೊಳೆಯುತ್ತೇನೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು