News Karnataka Kannada
Friday, May 10 2024
ದೆಹಲಿ

FasTag ಉಳಿಸಿಕೊಳ್ಳಲು KYC ಅಗತ್ಯ; ಜ.೩೧ರ ತನಕ ಅವಕಾಶ

Fastag
Photo Credit : News Kannada

ನವದೆಹಲಿ: KYC ಪೂರ್ಣಗೊಳ್ಳದ ಫಾಸ್ಟ್ಯಾಗ್‌ ಗಳನ್ನು ಜ.೩೧ರಿಂದ ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೋಮವಾರ ಎಚ್ಚರಿಸಿದೆ.

ಗುರುತು ಹಾಗು ಪರಿಶೀಲನೆಗೆ ಸಹಕಾರಿಯಾಗಿರುವ KYC (know your customer) ಪೂರ್ಣಗೊಳಿಸದೇ ಇದ್ದಲ್ಲಿ ಖಾತೆಯಲ್ಲಿ ಬಾಕಿ ಮೊತ್ತವಿದ್ದರೂ ಕೂಡ ಬ್ಯಾಂಕಿನ ಕಡೆಯಿಂದ ಫಾಸ್ಟ್ಯಾಗ್‌ ನಿಷ್ಕ್ರಿಯಗೊಳ್ಳಲಿದೆ ಎಂದು NHAI ತಿಳಿಸಿದೆ.

ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್ ಪ್ಲಾಜಾಗಳ ಬಳಿ ಸರತಿಯಲ್ಲಿ ನಿಂತು ಸಾಗುವ ತೊಂದರೆ ತಪ್ಪಿಸಿ ಸರಳ ಹಾಗು ಸುಗಮ ವ್ಯವಸ್ಥೆ ಕಲ್ಪಿಸಲು ʼಒನ್ ವೆಹಿಕಲ್ – ಒನ್ ಫಾಸ್ಟ್ಯಾಗ್ʼ ಎಂಬ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲಾಗಿತ್ತು. ಈ ವ್ಯವಸ್ಥೆಯಿಂದಾಗಿ ಹಲವು ವಾಹನಗಳಿಗೆ ಒಂದೇ Fastag ಬಳಸುವುದನ್ನು ಅಥವ ಒಂದು ವಾಹನಕ್ಕೆ ಹಲವು FasTag ಬಳಸುವುದನ್ನು ತಡೆಗಟ್ಟಲು ಅನುಕೂಲಕರವಾಗಿದೆ.

ಈಗ ಗ್ರಾಹಕರಿಗೆ ತಮ್ಮ KYC ಪೂರ್ಣಗೊಳಿಸಲು ಸೂಚಿಸಿ, ೩೧ರ ತನಕ ಕಾಲಾವಕಾಶ ಒದಗಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದಟೋಲ್ ಪ್ಲಾಜ಼ಾ ಅಥವ ಬ್ಯಾಂಕನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಭಾರತದಲ್ಲಿ ಪ್ರಸ್ತುತ ೮ ಕೋಟಿಗೂ ಅಧಿಕ ಮಂದಿ FasTag ಹೊಂದಿದ್ದು, KYC ಪೂರ್ಣಗೊಳಿಸದೆ FasTag ಹೊಂದುವುದು RBI ನಿಯಮದ ಪ್ರಕಾರ ತಪ್ಪು ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು