News Karnataka Kannada
Monday, May 06 2024
ದೆಹಲಿ

ಟಾಟಾ ಗ್ರುಪ್‌ ಒಡೆತನದ ಏರ್‌ ಇಂಡಿಯಾ ಕಂಪನಿ 200 ಹೊಸ ವಿಮಾನ ಖರೀದಿಸಲು ಚಿಂತನೆ

Call to Air India call centre over hijacking of aircraft
Photo Credit : IANS

ದೆಹಲಿ: ಟಾಟಾ ಗ್ರುಪ್‌ ಒಡೆತನದ ಏರ್‌ ಇಂಡಿಯಾ ಕಂಪನಿಯು 200 ಹೊಸವಿಮಾನಗಳನ್ನು ಖರೀದಿಸಲು ಚಿಂತಿಸುತ್ತಿದೆ. ಹಾಗೂ ಪ್ರಯಾಣವನ್ನು ಹೆಚ್ಚು ಸುಗಮಗೊಳಿಸುವ ದೃಷ್ಟಿಯಿಂದ ಕಿರಿದಾದ ದೇಹದ (ನ್ಯಾರೋ ಬಾಡಿ) ವಿಮಾನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಯೋಚಿಸುತ್ತಿದೆ ಎನ್ನಲಾಗಿದೆ.

ಈ ಕುರಿತು ವಿಮಾನ ತಯಾರಕ ಕಂಪನಿಗಳಾದ ಏರ್‌ಬಸ್‌ ಮತ್ತು ಬೋಯಿಂಗ್‌ನೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಏರ್‌ ಇಂಡಿಯಾ ಹೇಳಿದೆ. ಅಲ್ಲದೇ ಏರ್‌ಬಸ್‌ನ A350ಯಂತಹ ವಿಶಾಲ ದೇಹವುಳ್ಳ ವಿಮಾನದ ಕುರಿತಾಗಿಯೂ ಚಿಂತಿಸಲಾಗುತ್ತಿದೆ. ಇದು ದೊಡ್ಡ ಇಂಧನ ಟ್ಯಾಂಕ್‌ ಹೊಂದಿದ್ದು ಹೆಚ್ಚು ದೂರ ಕ್ರಮಿಸಲು ಸಹಾಯಕ ವಾಗಿದೆ.

2011ರ ನಂತರ ಏರ್‌ ಇಂಡಿಯಾ ಇದುವರೆಗೂ ಒಂದೇ ಒಂದು ವಿಮಾನವನ್ನು ಖರೀದಿಸಿಲ್ಲ. ಪ್ರಸ್ತುತ 200 ಹೊಸ ಏರೋಪ್ಲೇನ್‌ಗಳನ್ನು ಖರೀದಿಸಲು ಚಿಂತಿಸಲಾಗುತ್ತಿದ್ದು ಏರ್‌ ಇಂಡಿಯಾ ಮುಂದಿನ ದಿನಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಕೊಳ್ಳುವ ಭರವಸೆ ಮೂಡುವಂತೆ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು