News Karnataka Kannada
Thursday, May 09 2024
ದೆಹಲಿ

ದೆಹಲಿ ಬಜೆಟ್‌ ಮಂಡನೆ, ಆರೋಗ್ಯ, ಸ್ಥಳೀಯ ಸಂಸ್ಥೆಗಳಿಗೆ 8,241 ಕೋಟಿ ರೂಪಾಯಿ

Rs 8,241 crore allocated for Delhi budget presentation, health, local bodies
Photo Credit : IANS

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಬಜೆಟ್‌ನ್ನು ಹಣಕಾಸು ಸಚಿವ ಕೈಲಾಶ್ ಗಹ್ಲೋಟ್ ಮಂಡಿಸಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಜೊತೆಗೆ ನಗರದ ಮೂಲಸೌಕರ್ಯ, ನೈರ್ಮಲ್ಯ ಮತ್ತು ಸಾರಿಗೆ ಸೌಲಭ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸಲಾಗಿದೆ ಎಂದು ಸಚಿವರು ವಿವರಿಸಿದರು.

2023-24ರ ಆರ್ಥಿಕ ವರ್ಷದಲ್ಲಿ ಸ್ಥಳೀಯ ಸಂಸ್ಥೆಗಳಿಗೆ 8,241 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಗಹ್ಲೋಟ್ ಘೋಷಿಸಿದರು. ಹೊಸ ಮೇಲ್ಸೇತುವೆ ಯೋಜನೆಗಳಿಗೆ 722 ಕೋಟಿ ರೂ. ಮತ್ತು ನಗರದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಗೆ 320 ಕೋಟಿ ರೂ. ನೀಡಲಾಗುವುದು ಎಂದರು.

ನಗರದ ಮೂಲಸೌಕರ್ಯಕ್ಕಾಗಿ ಸಮಗ್ರ ಯೋಜನೆಯನ್ನು ಮಂಡಿಸಿದ ಗಹ್ಲೋಟ್, ಈ ಆರ್ಥಿಕ ವರ್ಷದಲ್ಲಿ 1,400 ಕಿಮೀ ಪಿಡಬ್ಲ್ಯೂಡಿ ರಸ್ತೆಯನ್ನು ನವೀಕರಿಸಲಾಗುವುದು ಎಂದು ಘೋಷಿಸಿದರು.

ಇದರೊಂದಿಗೆ 26 ಹೊಸ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ದೆಹಲಿ ಮೆಟ್ರೋ ರೈಲ್ ಕಾರ್ಪೊರೇಶನ್‌ನ ಸಹಕಾರದೊಂದಿಗೆ ಮೂರು ವಿಶಿಷ್ಟ ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ನ ನಿರ್ಮಿಸುವುದಾಗಿ ಘೋಷಿಸಿದರು.

ಹಣಕಾಸು ವರ್ಷದಲ್ಲಿ 1,600 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಾಗುವುದು ಎಂದು ಗಹ್ಲೋಟ್ ತಮ್ಮ ಬಜೆಟ್‌ನಲ್ಲಿ ಹೇಳಿದ್ದಾರೆ. “ದೇಶದಲ್ಲಿ ದೆಹಲಿಯು ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಹೊಂದಲಿದೆ. 2025 ರ ಅಂತ್ಯದ ವೇಳೆಗೆ 10,400 ಬಸ್‌ಗಳ ಸಮೂಹವು 80 ಪ್ರತಿಶತ ಎಲೆಕ್ಟ್ರಿಕ್ ಬಸ್‌ ಹೊಂದಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು