News Karnataka Kannada
Monday, April 29 2024
ದೆಹಲಿ

ಜರ್ಮನ್​ ಯುವತಿಯೊಬ್ಬರ ರೀಲ್ಸ್​ ಶೇರ್ ಮಾಡಿದ ಪ್ರಧಾನಿ

ಅಯೋಧ್ಯೆ ರಾಮಮಂದಿರ ಇನ್ನೇನು ನಾಲ್ಕು ದಿನಗಳಲ್ಲಿ  ಲೋಕಾರ್ಪಣೆಗೊಳ್ಳಲಿದೆ. ಇದರ ಬೆನ್ನಲ್ಲೇ ರಾಮನ ಬಗ್ಗೆ ಹಾಡು ಹಾಡಿದ ಜರ್ಮನ್​ನ ಯುವತಿಯೊಬ್ಬರ ರೀಲ್ಸ್​ ಅನ್ನು ಪ್ರಧಾನಿಯವರು ಶೇರ್ ಮಾಡಿದ್ದಾರೆ.
Photo Credit : News Kannada

ದೆಹಲಿ: ಅಯೋಧ್ಯೆ ರಾಮಮಂದಿರ ಇನ್ನೇನು ನಾಲ್ಕು ದಿನಗಳಲ್ಲಿ  ಲೋಕಾರ್ಪಣೆಗೊಳ್ಳಲಿದೆ. ಇದರ ಬೆನ್ನಲ್ಲೇ ರಾಮನ ಬಗ್ಗೆ ಹಾಡು ಹಾಡಿದ ಜರ್ಮನ್​ನ ಯುವತಿಯೊಬ್ಬರ ರೀಲ್ಸ್​ ಅನ್ನು ಪ್ರಧಾನಿಯವರು ಶೇರ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಜರ್ಮನ್​ ಸಿಂಗರ್ ಆಗಿರುವ ಕಸ್ಸಂದ್ರ ಮೇ ಸ್ಪಿಟ್ಮನ್ ಎನ್ನುವರ ರೀಲ್ಸ್ ಶೇರ್ ಮಾಡಿದ್ದಾರೆ.

ನಾನು ಒಮ್ಮೆ ಮನ್​ ​ಕೀ ಬಾತ್​ನಲ್ಲಿ ಈ ಸಿಂಗರ್ ಬಗ್ಗೆ ಉಲ್ಲೇಖ ಮಾಡಿದ್ದೆ. ಅವರು ಹಾಡಿರುವ ರಾಮನ ಹಾಡು ತುಂಬಾ ಇಂಪಾಗಿದೆ. ಹಾಡನ್ನು ಕೇಳಿದಾಗ ಮನಸಿಗೆ ಆಹ್ಲಾದಕರ ಅನುಭವ ಆಗುತ್ತೆ ಎಂದು ಬರೆದುಕೊಂಡಿದ್ದಾರೆ.

ಕಸ್ಸಂದ್ರ ಮೇ ಸ್ಪಿಟ್ಮನ್ ‘ರಾಮ ಆಯೆಂಗೇ, ರಾಮ ಆಯೆಂಗೇ ತೊ ಅಂಗಾನಾ ಸಜವುಂಗಿ’ ಎನ್ನುವ ಹಾಡನ್ನು ಹಾಡಿದ್ದಾರೆ.

ಇನ್ನು ಪ್ರಧಾನಿ ಮೋದಿಯವರು 105ನೇ ಮನ್ ಕೀ ಬಾತ್ ಸಂಚಿಕೆಯಲ್ಲಿ ಈ ಸಿಂಗರ್ ಬಗ್ಗೆ ಉಲ್ಲೇಖ ಮಾಡಿದ್ದರು. ಸದ್ಯ ಇದೀಗ ರಾಮಮಂದಿರ ಉದ್ಘಾಟನೆ ಮುನ್ನವೇ ಮತ್ತೊಮ್ಮೆ ಕಸ್ಸಂದ್ರ ಮೇ ಸ್ಪಿಟ್ಮನ್ ಅವರ ಫೋಟೋ ಶೇರ್ ಮಾಡಿದ್ದಾರೆ.

ಕಸ್ಸಂದ್ರ ಮೇ ಸ್ಪಿಟ್ಮನ್ ಅವರು ಕನ್ನಡ, ಹಿಂದಿ, ಉರ್ದು, ಅಸ್ಸಾಮಿ, ಮಲಯಾಳಂ, ತಮಿಳು, ಬಂಗಾಳಿ, ಸಂಸ್ಕೃತವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು