ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ 2023ರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ 86 ರನ್ ಚಚ್ಚಿ ಪಾಕ್ ಬೌಲರ್ಗಳ ಬೆವರಿಳಿಸಿದರು. ಈ ಗೆಲುವಿನ ಮೂಲಕ ಭಾರತ ತಂಡ ವಿಶ್ವಕಪ್ ಪಾಯಿಂಟ್ ಟೇಬಲ್ನಲ್ಲಿ ಆರು ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೇರಿದೆ.
ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಗೆಲುವನ್ನು ಪಟಾಕಿ ಹಚ್ಚಿ, ತಿರಂಗ ಹಾರಾಡಿಸಿ ಸಂಭ್ರಮಿಸಿದ್ದಾರೆ. ಕಾಶ್ಮೀರದ ಬೀದಿ ಬೀದಿಯಲ್ಲಿ ಸಂಭ್ರಮ ಮನೆ ಮಾಡಿದೆ. ಕೇವಲ ಕಾಶ್ಮೀರ ಮಾತ್ರವಲ್ಲ, ದೇಶದ ಮೂಲೆ ಮೂಲೆಗಳಲ್ಲಿ ಪಾಕಿಸ್ತಾನ ವಿರುದ್ದದ ಗೆಲುವಿನ ಸಂಭ್ರಮ ಶುರುವಾಗಿದೆ.
ಪಾಕ್ ವಿರುದ್ದ ಗೆಲುವು ದಾಖಲಿಸುತ್ತಿದ್ದಂತೆ ಕಾಶ್ಮೀರ ಬೀದಿಯಲ್ಲಿ ಸಾವಿರಕ್ಕಿಂತೂ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಮಿಸಿದ್ದಾರೆ. ಭಾರತ ಅಭೂಪತಪೂರ್ವ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಹಮ್ಮದಾಬಾದ್ನಲ್ಲಿ ಟೀಂ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಇದು ಅಲ್ರೌಂಡ್ ಶ್ರೇಷ್ಠ ಆಟ, ತಂಡಕ್ಕೆ ಅಭಿನಂದನೆ, ಮುಂದಿನ ಪಂದ್ಯಕ್ಕೆ ಶುಭಾಶಯ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ತ್ರಿವರ್ಣ ಧ್ವಜ ಮತ್ತಷ್ಟು ಎತ್ತರದಲ್ಲಿ ಹಾರಾಡುತ್ತಿದೆ. ಅತ್ಯದ್ಭುತ ಗೆಲುವಿಗೆ ಭಾರತ ಕ್ರಿಕೆಟ್ ತಂಡಕ್ಕೆ ದೊಡ್ಡ ಚಪ್ಪಾಳೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಗೆಲುವಿನ ಓಟ ಮುಂದುವರೆಸಿದೆ. ತಂಡವಾಗಿ ಉತ್ತಮ ಆಟ ಪ್ರದರ್ಶನ ರಾಷ್ಟ್ರದ ಹಿರಿಮೆಯನ್ನು, ಹೆಮ್ಮೆಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲಿದೆ ಅನ್ನೋದನ್ನು ತೋರಿಸಿದ್ದೀರಿ ಎಂದು ಅಮಿತ್ ಶಾ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
Team India all the way!
A great win today in Ahmedabad, powered by all round excellence.
Congratulations to the team and best wishes for the matches ahead.
— Narendra Modi (@narendramodi) October 14, 2023