News Karnataka Kannada
Tuesday, April 30 2024
ದೆಹಲಿ

ಅಜ್ಮೀರ್ ಷರೀಫ್ ದರ್ಗಾಕ್ಕೆ ‘ಚಾದರ್’ ಅನ್ನು ಉಡುಗೊರೆಯಾಗಿ ನೀಡಿದ ಮೋದಿ

ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಸಮುದಾಯದ ನಿಯೋಗದೊಂದಿಗೆ ಸಂವಾದ ನಡೆಸಿದ್ದು ಅವರಿಗೆ ಅಜ್ಮೀರ್ ಷರೀಫ್ ದರ್ಗಾಕ್ಕೆ  ಅರ್ಪಿಸಲು ಉದ್ದೇಶಿಸಿರುವ ‘ಚಾದರ್’ ಅನ್ನು ಉಡುಗೊರೆಯಾಗಿ ನೀಡಿದರು.
Photo Credit : News Kannada

ದೆಹಲಿ: ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಸಮುದಾಯದ ನಿಯೋಗದೊಂದಿಗೆ ಸಂವಾದ ನಡೆಸಿದ್ದು ಅವರಿಗೆ ಅಜ್ಮೀರ್ ಷರೀಫ್ ದರ್ಗಾಕ್ಕೆ  ಅರ್ಪಿಸಲು ಉದ್ದೇಶಿಸಿರುವ ‘ಚಾದರ್’ ಅನ್ನು ಉಡುಗೊರೆಯಾಗಿ ನೀಡಿದರು.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡ ಮೋದಿ, “ಮುಸ್ಲಿಂ ಸಮುದಾಯದ ನಿಯೋಗವನ್ನು ಭೇಟಿಯಾದೆ. ನಮ್ಮ ಸಂವಾದದ ಸಮಯದಲ್ಲಿ, ನಾನು ಪವಿತ್ರ ಚಾದರ್ ಅನ್ನು ನೀಡಿದ್ದು ಇದನ್ನು ಗೌರವಾನ್ವಿತ ಅಜ್ಮೀರ್ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರೂಸ್ ಸಮಯದಲ್ಲಿ ಇರಿಸಲಾಗುವುದು ಎಂದಿದ್ದಾರೆ.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ದಿಕಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಮೋದಿ ಅವರು ಹಂಚಿಕೊಂಡ ಚಿತ್ರಗಳಲ್ಲಿ, ಪ್ರಧಾನಿ ಅವರು ನಿಯೋಗದೊಂದಿಗೆ ಮಾತನಾಡುತ್ತಿರುವುದು ಮತ್ತು ಅವರಿಗೆ ‘ಚಾದರ್’ ನೀಡುತ್ತಿರುವುದನ್ನು ಕಾಣಬಹುದು. ಸುಮಾರು 10 ಸದಸ್ಯರನ್ನೊಳಗೊಂಡ ನಿಯೋಗವು ಪ್ರಧಾನಮಂತ್ರಿ ಮತ್ತು ಚಾದರ್ ಜತೆ ಪೋಸ್ ನೀಡಿದೆ.

ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ 812 ನೇ ವಾರ್ಷಿಕ ಉರೂಸ್ ಜನವರಿ 8 ರಂದು ಪ್ರಾರಂಭವಾಯಿತು. ಭಿಲ್ವಾರಾದ ಗೋರಿ ಕುಟುಂಬವು ಜನವರಿ 7 ರಂದು ಧ್ವಜಾರೋಹಣ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು