News Karnataka Kannada
Thursday, May 02 2024
ದೆಹಲಿ

ಪೇಟಿಎಂ ಕಾರ್ನಿವಲ್ ಸೇಲ್: ವಿಮಾನ, ರೈಲು, ಬಸ್ ಟಿಕೆಟ್​ಗೆ ಡಿಸ್ಕೌಂಟ್

Paytm Carnival sale: Discounts on flight, train, bus tickets
Photo Credit : News Kannada

ನವದೆಹಲಿ: ಹಣಕಾಸು ತಂತ್ರಜ್ಞಾನ ಸಂಸ್ಥೆ ಪೇಟಿಎಂ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಸಖತ್ ಆಫರ್​ಗಳನ್ನು ಗ್ರಾಹಕರ ಮುಂದಿಟ್ಟಿದೆ. ಅದರಲ್ಲೂ ಫ್ಲೈಟ್, ರೈಲು ಮತ್ತು ಬಸ್ಸುಗಳ ಟಿಕೆಟ್ ಬುಕಿಂಗ್​ಗೆ ಡಿಸ್ಕೌಂಟ್ ಸೇರಿದಂತೆ ವಿವಿಧ ಆಫರ್​ಗಳಿವೆ. ಅಕ್ಟೋಬರ್ 27ರಂದೇ ಶುರುವಾದ ಕಾರ್ನಿವಲ್ ಸೇಲ್ ನವೆಂಬರ್ 5ಕ್ಕೆ ಮುಗಿಯುತ್ತದೆ. ವಿಮಾನ ಟಿಕೆಟ್​ಗಳಿಗಂತೂ ಬಹಳಷ್ಟು ರಿಯಾಯಿತಿಗಳನ್ನು ಪೇಟಿಎಂ ಘೋಷಿಸಿದೆ.

ದೇಶೀಯ ಫ್ಲೈಟ್​ಗಳಿಗೆ ಶೇ. 15ರಷ್ಟು ಇನ್ಸ್​ಟೆಂಟ್ ಡಿಸ್ಕೌಂಟ್ ಕೊಡಲಾಗುತ್ತಿದೆ. ಅಂತಾರಾಷ್ಟ್ರೀಯ ಫ್ಲೈಟ್​​ಗಳಿಗೆ ಶೇ. 10ರಷ್ಟು ರಿಯಾಯಿತಿ ಇದೆ. ಈ ಆಫರ್ ನವೆಂಬರ್ 5ರವರೆಗೂ ಮಾತ್ರವೇ ಇರುವುದು. ಇಂಡಿಗೋ, ವಿಸ್ತಾರ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್​ಪ್ರೆಸ್, ಸ್ಪೈಸ್​ಜೆಟ್, ಸ್ಟಾರ್ ಏರ್ ಮತ್ತು ಆಕಾಸ ಏರ್​ಲೈನ್ಸ್ ಸಂಸ್ಥೆಗಳ ಫ್ಲೈಟ್​ಗಳ ಬುಕಿಂಗ್​ಗೆ ಪೇಟಿಎಂ ಈ ಭರ್ಜರಿ ಡಿಸ್ಕೌಂಟ್​​ಗಳನ್ನು ಕೊಟ್ಟಿದೆ.

ವಿಮಾನ ಮಾತ್ರವಲ್ಲ ಬಸ್ ಟಿಕೆಟ್​ಗೂ ಪೇಟಿಎಂ ಬೆಸ್ಟ್ ಪ್ರೈಸ್ ನೀಡುತ್ತಿದೆ. ತನ್ನ ಪ್ಲಾಟ್​ಫಾರ್ಮ್​ನಲ್ಲಿ ಬಸ್ ಟಿಕೆಟ್ ಅತಿ ಕಡಿಮೆ ಎಂದು ಪೇಟಿಎಂ ಹೇಳಿಕೊಂಡಿದೆ. 2,500 ಬಸ್ ಆಪರೇಟರುಗಳನ್ನು ಪೇಟಿಎಂ ಒಳಗೊಂಡಿದೆ. ಈ ಪ್ಲಾಟ್​ಫಾರ್ಮ್​ನಲ್ಲಿ ಲೈವ್ ಬಸ್ ಟ್ರ್ಯಾಕಿಂಗ್ ಸೌಲಭ್ಯವೂ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು