ನವದೆಹಲಿ: ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಶನಿವಾರ ರೂ.25.5ರಷ್ಟು ಇಳಿಕೆ ಮಾಡಿವೆ.
ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ ದೆಹಲಿಯಲ್ಲಿ 25.5 ರೂಪಾಯಿ ಕಡಿಮೆಯಾಗಿ 1,859.50 ರೂಪಾಯಿ ಆಗಿದೆ. ಕೋಲ್ಕತ್ತದಲ್ಲಿ 19 ಕೆ.ಜಿ ತೂಕದ ಸಿಲಿಂಡರ್ ದರ ₹ 1,995.50ರಿಂದ ₹ 1,959 ಆಗಿದ್ದರೆ, ಮುಂಬೈನಲ್ಲಿ 19 ಕೆ.ಜಿ ತೂಕದ ಸಿಲಿಂಡರ್ ದರ ₹ 1,844 ರಿಂದ ₹ 1,811.50 ಮತ್ತು ಚೆನ್ನೈನಲ್ಲಿ 19 ಕೆ.ಜಿ ತೂಕದ ಸಿಲಿಂಡರ್ ದರ ₹ 2,009.50, ಬೆಂಗಳೂರಿನಲ್ಲಿ ₹2100.0 ಇಳಿಕೆ ಆಗಿದೆ.
ಸೆ.1ರಂದು ಸಿಲಿಂಡರ್ ದರವನ್ನು ₹ 91.5ರಷ್ಟು ಇಳಿಕೆ ಮಾಡಲಾಗಿತ್ತು.