News Karnataka Kannada
Sunday, May 05 2024
ದೆಹಲಿ

ದೆಹಲಿ: ಭಯೋತ್ಪಾದಕ ಮೊಹಮ್ಮದ್ ಆರಿಫ್‌ ಗೆ ವಿಧಿಸಲಾದ ಮರಣದಂಡನೆಯನ್ನು ದೃಢಪಡಿಸಿದ ಸುಪ್ರೀಂ ಕೋರ್ಟ್!

ಸುಪ್ರೀಂ ಕೋರ್ಟ್‌
Photo Credit : Twitter

ನವದೆಹಲಿ: 2000 ರ ಕೆಂಪು ಕೋಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಮೊಹಮ್ಮದ್ ಆರಿಫ್‌ ಗೆ ವಿಧಿಸಲಾದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ದೃಢಪಡಿಸಿದೆ. ಘಟನೆಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು
ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರು ಎಲೆಕ್ಟ್ರಾನಿಕ್ ದಾಖಲೆಗಳನ್ನು ಪರಿಗಣನೆಯಿಂದ ಹೊರಗಿಡಬೇಕು ಎಂಬ ಪ್ರಾರ್ಥನೆ ಯನ್ನು ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ಗಮನಿಸಿದರು.

ಪ್ರಕರಣದ ಸಮಗ್ರತೆಯನ್ನು ಪರಿಗಣಿ, ಅವರ ಅಪರಾಧ ಸಾಬೀತಾಗಿದೆ, ಆದ್ದರಿಂದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಪೀಠ ಹೇಳಿದೆ. 2000 ಡಿಸೆಂಬರ್ 22 ರಂದು ಕೆಲವು ನುಸಳುಕೋರರು ಮನಬಂದಂತೆ ಗುಂಡು ಹಾರಿಸಿದರು.

7ನೇ ರಜಪೂತಾನ್ ರೈಫಲ್ಸ್‌ ಗೆ ಸೇರಿದ ಇಬ್ಬರು ಸೇನಾ ಜವಾನರು ಸೇರಿದಂತೆ ಮೂವರನ್ನು ಗುಂಡಿಕ್ಕಿ ಕೊಂದಿದ್ದರು. ಮೊಹಮ್ಮದ್ ಆರಿಫ್ ಎಂಬ ಪಾಕಿಸ್ತಾನಿ ಪ್ರಜೆಯನ್ನು 2000 ಡಿಸೆಂಬರ್ 25 ರಂದು ಈ ಪ್ರಕರಣದಲ್ಲಿ ಬಂಧಿಸಲಾಯಿತು. ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿತು. ನಂತರ ಆತನ ಮರಣದಂಡನೆಯನ್ನು ದೆಹಲಿ ಹೈಕೋರ್ಟ್ ದೃಢಪಡಿಸಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು