ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 40 ವರ್ಷಗಳಿಂದ ದೇಶಕ್ಕಾಗಿ ದುಡಿಯುತ್ತಿದ್ದಾರೆ. ಇನ್ನೂ 10 ವರ್ಷಗಳ ಕಾಲ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕಾರ್ಯಕ್ರಮ ಒಂದರಲ್ಲಿ ಮಾತಾಡಿದ ಅಮಿತ್ ಶಾ ಅವರು, ನಾನು ಪ್ರಧಾನಿ ನರೇಂದ್ರ ಮೋದಿ ರೀತಿಯ ನಾಯಕನನ್ನೂ ಎಂದು ನೋಡಿಲ್ಲ. ಮೋದಿ ಬೆಳಗ್ಗೆ 5 ಎದ್ದು ಮಧ್ಯರಾತ್ರಿವರೆಗೂ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಇದನ್ನು ನನ್ನ ಕಣ್ಣಾರೆ ನೋಡಿದ್ದೇನೆ. ಮೋದಿ 23 ವರ್ಷಗಳ ಕಾಲ ಸಿಎಂ ಮತ್ತು ಪ್ರಧಾನಿ ಆಗಿದ್ರೂ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದರು.
ಮೋದಿ ಪ್ರಧಾನಿಯಾದ ಮೇಲೆ ಕಾರ್ಯಕ್ಷಮತೆ ರಾಜಕೀಯ ಸ್ಥಾಪಿಸಿದ್ದಾರೆ. ನಾವೇ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ, ಮುಂದಿನ 10 ವರ್ಷ ಮೋದಿ ಪ್ರಧಾನಿ ಆಗಿರಲಿದ್ದಾರೆ.
ನಮ್ಮದು ಕ್ರಿಯಾತ್ಮಕ ಪ್ರಜಾಪ್ರಭುತ್ವ. ಅದು ಸರ್ಕಾರದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ. ಈ ಹಿಂದೆ ಭಾರತ ಜಾತಿ, ಧರ್ಮದ ಆಧಾರದ ಮೇಲೆ ವಿಭಜನೆ ಆಗಿತ್ತು ಎಂದರು.