ನವದೆಹಲಿ: ಜಮ್ಮುಕಾಶ್ಮೀರದಲ್ಲಿ 11 ಭಯೋತ್ಪಾದಕರ ದಾಳಿಗಳಲ್ಲಿ ಭಾಗಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರಗಾಮಿ ಜಾವೇದ್ ಮಟ್ಟೂನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶೀಘ್ರದಲ್ಲೇ ಜಮ್ಮುಕಾಶ್ಮೀರದಲ್ಲಿ ದೊಡ್ಡ ಅನಾಹುತ ಸೃಷ್ಟಿಸುವ ಪ್ಲಾನ್ನಲ್ಲಿ ಉಗ್ರ ಜಾವೇದ್ ಇದ್ದನು ಎಂದು ಹೇಳಲಾಗಿದೆ.
ಭಯೋತ್ಪಾದಕ ಜಾವೇದ್ ಮಟ್ಟೂ (32) ಜಮ್ಮು ಕಾಶ್ಮೀರದ ಸೊಪೊರ್ನ ನಿವಾಸಿ. ನಿಷೇಧಿತ ಮುಜಾಹಿದ್ದೀನ್ ಸಂಘಟನೆಯ A++ ವರ್ಗದ ಉಗ್ರಗಾಮಿಯಾಗಿದ್ದ. ಕಳೆದ 13 ವರ್ಷಗಳನ್ನು ಸೆರೆ ಹಿಡಿಯಲು ಪೊಲೀಸರು ಹುಡುಕಾಡುತ್ತಿದ್ದರು. ಆದರೆ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಾಡುತ್ತಿದ್ದ ಎಂದು ದೆಹಲಿಯ ಪೊಲೀಸರು ಮಾಹಿತಿ ನೀಡಿದ್ದಾರೆ