ನವದೆಹಲಿ: ವಿಪಕ್ಷಗಳ ಮೈತ್ರಿಕೂಟವನ್ನು ಇಂಡಿಯಾ ಎಂದು ಕರೆಯಬೇಡಿ ಬದಲಾಗಿ ‘ಘಮಂಡಿಯಾ’ ಎಂದು ಕರೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಮಾತಿನ ಛಾಟಿ ಬೀಸಿದ್ದಾರೆ. ಹಿಂದಿಯಲ್ಲಿ ಘಮಂಡ್ ಎಂದರೆ ಅಹಂಕಾರ ಎಂದರ್ಥ. ಇತ್ತೀಚಿನ ದಿನಗಳಲ್ಲಿ ವಿಪಕ್ಷಗಳು ತಮ್ಮ ಒಕ್ಕೂಟವನ್ನು ಇಂಡಿಯಾ ಎಂದು ಕರೆದುಕೊಳ್ಳುತ್ತಿರುವುದಕ್ಕೆ ಪದೇ ಪದೇ ಪ್ರಧಾನಿ ಮೋದಿ ಕಿಡಿಕಾರುತ್ತಲೇ ಇದ್ದಾರೆ.
ವಿಶೇಷವಾಗಿ ಕಾಂಗ್ರೆಸ್, ಹಿಂದಿನ ಯುಪಿಎ ಅಥವಾ ಯುನೈಟೆಡ್ ಪ್ರೋಗ್ರೆಸ್ಸೀವ್ ಅಲೈಯನ್ಸ್ ಎಂದು ಹಿಂದಿನ ದಾಖಲೆಗೆ ಮರುನಾಮಕರಣ ಮಾಡಲು ಪ್ರಯತ್ನಿಸುತ್ತಿವೆ. ಇಂಡಿಯಾ ಎಂದು ಕರೆದುಕೊಳ್ಳುವುದು ದೇಶಪ್ರೇಮದಿಂದಲ್ಲ ದೇಶವನ್ನು ದೋಚುವ ಉದ್ದೇಶದಿಂದ ಎಂದು ಮೋದಿ ವಾಗ್ದಾಳಿ ನಡೆಸಿದ್ದರು. ಸರ್ಕಾರದ ಯೋಜನೆಗಳನ್ನು ಎನ್ಡಿಎ ಸರ್ಕಾರದ ಯೋಜನೆಗಳು ಎಂದು ವಿವರಿಸಲು ಸಂಸದರಿಗೆ ಪ್ರಧಾನಿ ಸಲಹೆ ನೀಡಿದರು