ನವದೆಹಲಿ: ವ್ಯಕ್ತಿಯೊಬ್ಬನಿಗೆ ಗುದ್ದಿದ ಟೆಂಪೊ ಟ್ರಾವೆಲರ್, ಬಾನೆಟ್ ಮೇಲೆ ಬಿದ್ದಿದ್ದ ಆತನನ್ನು ತುಸು ದೂರ ಎಳೆದುಕೊಂಡು ಹೋದ ಘಟನೆ ದಕ್ಷಿಣ ದೆಹಲಿಯ ಲಜ್ಪತ್ ನಗರದಲ್ಲಿ ನಡೆದಿದೆ.
ಮಿನಿಬಸ್ ಬಾನೆಟ್ನಲ್ಲಿ ವ್ಯಕ್ತಿಯೊಬ್ಬ ನಿಂತಿರುವುದು ದಾಖಲಾಗಿದೆ. ಇನ್ನೊಂದು ವಿಡಿಯೊದಲ್ಲಿ ಬಾನೆಟ್ ಇಳಿಯುವ ದೃಶ್ಯಗಳಿವೆ.
ಈ ಬಗ್ಗೆ ರಾತ್ರಿ 11.30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಡಿಎನ್ಡಿ ಮೇಲೇತುವೆ ಮೂಲಕ ನೋಯ್ದಾಗೆ ತೆರಳುವ ವೇಳೆ ಘಟನೆ ನಡೆದಿದ್ದಾಗಿ ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾನೆ. ಲಜಪತ್ನಗರದಲ್ಲಿ ಮಿನಿಬಸ್ ವ್ಯಕ್ತಿಗೆ ಗುದ್ದಿದ್ದು, ತುಸು ದೂರು ಎಳೆದುಕೊಂಡು ಹೋಗಿದೆ. ಕರೆ ಮಾಡಿದ ವ್ಯಕ್ತಿ ಮಿನಿಬಸ್ ಅನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯ ಆಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಳಿಕ ಕರೆ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿದಾಗ, ತಾನು ಉತ್ತರ ಪ್ರದೇಶದಲ್ಲಿರುವುದಾಗಿಯೂ, ದೆಹಲಿಗೆ ಬರಲು ಅಸಾಧ್ಯ ಎಂದು ಹೇಳಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ. ದೆಹಲಿಗೆ ಬರುವಂತೆ ಅವರ ಮನವೊಲಿಸಲಾಗುತ್ತಿದ್ದು, ಬಳಿಕ ದೂರು ಪಡೆದು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.