News Karnataka Kannada
Thursday, May 02 2024
ದೆಹಲಿ

‘ಮನ್​ಕೀ ಬಾತ್’: ಬೆಂಗಳೂರಿನ ಧನ್​ ಪಾಲ್​ ಅವರ ಕುರಿತು ಪ್ರಧಾನಿ ಮೋದಿ ಮಾತು

'Mann Ki Baat': PM Modi speaks about Dhanpal in Bengaluru
Photo Credit : By Author

ದೆಹಲಿ: ಪ್ರಧಾನಿ ಮೋದಿ ಅವರು ಇಂದು (ಆಗಸ್ಟ್ 27) ತಮ್ಮ 104 ಮನ್​ಕೀ ಬಾತ್​ ಆವೃತ್ತಿಯಲ್ಲಿ ಚಂದ್ರಯಾನ-3 ಯಶಸ್ಸು, ಇಸ್ರೋ ವಿಜ್ಞಾನಿಗಳ ಸಾಹಸ ಹಾಗೂ ಹಬ್ಬದ ಸಮಯದಲ್ಲಿ ಸ್ಥಳೀಯ ವಸ್ತುಗಳನ್ನೇ ಖರೀದಿ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಹೇಳಿದರು.

ಇದೇ ವೇಳೆ ಮೋದಿ ಅವರು ತಮ್ಮ ಮನ್​ಕೀ ಬಾತ್​ನಲ್ಲಿ ಬೆಂಗಳೂರಿನ ಧನ್​ಪಾಲ್ ಎನ್ನುವವರನ್ನು ನೆನೆದಿರುವುದು ವಿಶೇಷವಾಗಿದೆ. ಯಾವಾಗ ಸಮಯ ಸಿಕ್ಕರೂ ನಮ್ಮ ದೇಶದ ವಿವಿಧತೆ ಹಾಗೂ ಸಂಪ್ರದಾಯವನ್ನು ನೋಡುವ ಅರಿಯುವ ಪ್ರಯತ್ನ ಮಾಡಿ. ಸಾಕಷ್ಟು ಮಂದಿ ತಮ್ಮ ಊರಿನ ಐತಿಹಾಸಿಕ ಪ್ರದೇಶಗಳ ಬಗ್ಗೆ ಅರಿವೇ ಇರುವುದಿಲ್ಲ.

ಹಾಗೆಯೇ ಬೆಂಗಳೂರಿನ ಧನ್​ಪಾಲ್ ಅವರು ಟ್ರಾನ್ಸ್​ಪೋರ್ಟ್​ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ದರ್ಶಿನಿಯಲ್ಲಿ ಬೇರೆ ರಾಜ್ಯ ಹಾಗೂ ಬೇರೆ ದೇಶಗಳ ಜನರಿಗೆ ಬೆಂಗಳೂರು ದರ್ಶನ ಮಾಡುವ ಅವಕಾಶ ದೊರೆಯಿತು.

ಆಗ ಒಂದು ದಿನ ಪ್ರವಾಸಿಗರೊಬ್ಬರು ಬೆಂಗಳೂರಿನಲ್ಲಿ ಸ್ಯಾಂಕಿ ಟ್ಯಾಂಕಿ ಇದೆಯಲ್ಲಾ ಅದಕ್ಕೆ ಆ ಹೆಸರು ಹೇಗೆ ಬಂತು ಎನ್ನುವ ಪ್ರಶ್ನೆ ಕೇಳಿದ್ದರು, ಆದರೆ ಧನ್ ಪಾಲ್ ಅವರಿಗೆ ತಮ್ಮ ಬಗ್ಗೆಯೇ ಬೇಸರವೆನಿಸಿತು, ನಂತರ ಕಲಿಕೆ ಶುರು ಮಾಡಿದರು. ಶಿಲಾಲೇಖದಲ್ಲಿ ಡಿಪ್ಲೊಮಾ ಕೂಡ ಮಾಡಿದ್ದಾರೆ, ಈಗ ರಿಟೈರ್ ಆಗಿದ್ದರೂ ಕೂಡ ತಮ್ಮ ಅಭಿರುಚಿ ಒಂದು ಚೂರು ಕಡಿಮೆಯಾಗಿಲ್ಲ ಎಂದಿದ್ದಾರೆ.

ಇತಿಹಾಸದ ಮೇಲಿನ ಅವರ ಪ್ರೀತಿ ಎಷ್ಟಿತ್ತೆಂದರೆ, ಧನಪಾಲ್ ಬಿಎಂಟಿಸಿಯಲ್ಲಿ ದೈನಂದಿನ ಪಾಳಿಯ ಕೆಲಸದ ನಂತರ ಬೆಂಗಳೂರಿನ ಪರಂಪರೆ ಅನ್ವೇಷಿಸಲು ಸಮಯವನ್ನು ವಿನಿಯೋಗಿಸಲು ಪ್ರಾರಂಭಿಸಿದ್ದರು. ತಮ್ಮ ಸ್ನೇಹಿತ ಮತ್ತು ಮಾರ್ಗದರ್ಶಕ ಪ್ರೊ. ಕೆ.ಆರ್.ನರಸಿಂಹನ್ ಅವರ ಸಹಾಯದಿಂದ ವಿವಿಧ ಕಾಲಕ್ಕೆ ಸೇರಿದ 100ಕ್ಕೂ ಹೆಚ್ಚು ಶಿಲಾ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ. ಕೆಲ ತಿಂಗಳ ಹಿಂದೆಯೇ ಬಿಎಂಟಿಸಿಯಿಂದಯಿಂದ ನಿವೃತ್ತರಾಗಿರುವ ಇವರು ಈಗ ತಮ್ಮ ಸಂಪೂರ್ಣ ಸಮಯವನ್ನು ಬೆಂಗಳೂರಿನ ಅನ್ವೇಷಣೆಯಲ್ಲಿ ಕಳೆಯುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು