ನವದೆಹಲಿ: ಮಣಿಪುರದಲ್ಲಿನ ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣದ ಸಿಬಿಐ ತನಿಖೆಗೆ ಗೃಹ ಸಚಿವಾಲಯ ಶಿಫಾರಸ್ಸು ಮಾಡಿದೆ. ಅಲ್ಲದೇ ಮಣಿಪುರದ ಹೊರಗೆ ಕೋರ್ಟ್ ವಿಚಾರಣೆ ನಡೆಸಲು ಅನುಮತಿ ನೀಡಬೇಕು. 6 ತಿಂಗಳಲ್ಲಿ ವಿಚಾರಣೆ ಮುಗಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಗೆ ಕೋರಿದೆ.
ಈ ಸಂಬಂಧ ಗುರುವಾರ ರಾತ್ರಿ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ತನ್ನ ನಿಲುವಿನ ಅಫಿಡವಿಟ್ ಸಲ್ಲಿಸಿದೆ. ಈ ಬಗ್ಗೆ ಮಾತನಾಡಿದ ಹಿರಿಯ ಧಿಕಾರಿಯೊಬ್ಬರು, ಇದು ಭೀಭತ್ಸ ಘಟನೆಯಾಗಿದೆ. ಹೀಗಾಗಿ ಸರ್ಕಾರ ಈ ವಿಷಯದಲ್ಲಿ ತಾತ್ಸಾರ ತಾಳುವುದಿಲ್ಲ. ನಿಷ್ಪಕ್ಷಪಾತ ತನಿಖೆ ಉದ್ದೇಶದಿಂದ ನಗ್ನ ಪರೇಡ್ ವಿಡಿಯೋ ಪ್ರಕರಮ ತನಿಖೆಯನ್ನು ಸಿಬಿಐಗೆ ವಹಿಸಿದೆ. ಅಸ್ಸಾಂ ಕೋರ್ಟ್ ನಲ್ಲಿ ಇದರ ವಿಚಾರಣೆಗೆ ಉದ್ದೇಶಿಸಲಾಗಿದೆ ಎಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೂ 8 ಜನರನ್ನು ಬಂಧಿಸಿದ್ದಾರೆ.