News Karnataka Kannada
Friday, May 17 2024
ದೆಹಲಿ

ರಾಜಕೀಯ ಜೀವನ ಮೆಲುಕು ಹಾಕಿದ ಮೇನಕಾ ಗಾಂಧಿ, ಪ್ರಧಾನಿ ಕುರಿತು ಹೀಗೆ ಹೇಳಿದ್ರು

Maneka Gandhi recalls her political career, says this about PM
Photo Credit : News Kannada

ನವದೆಹಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದಾಗ ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ನನಗೆ ನೀಡಿದ್ದು ಜೀವನದ ಅತ್ಯಂತ ಸಂತಸದ ಕ್ಷಣಗಳಲ್ಲೊಂದು ಎಂದು ಬಿಜೆಪಿಯ ಹಿರಿಯ ಸಂಸದೆ ಮೇನಕಾ ಗಾಂಧಿ ಹೇಳಿದ್ದಾರೆ.

ಸೆಂಟ್ರಲ್ ಹಾಲ್‌ನಲ್ಲಿ ಹಳೆಯ ಸಂಸತ್ತಿನ ಸ್ಮರಣಾರ್ಥ ವಿಶೇಷ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು NDA ಸರ್ಕಾರದ ಮೊದಲ ಅವಧಿಯನ್ನು ಮೆಲುಕು ಹಾಕಿದ್ದಾರೆ. ಬೇಟಿ ಬಚಾವೋ ಬೇಟಿ ಫಡಾವೋ ಯೋಜನೆ ಮೂಲಕ ನಾವು ಎರಡು ವರ್ಷಗಳಲ್ಲಿ ದೇಶದ ಜನರ ಚಿಂತನೆಯನ್ನು ಬದಲಾಯಿಸಿದ್ದೇವೆ. ಇದು ಅಂಕಿಅಂಶಗಳ ಮೂಲಕ ಸಾಬೀತಾಗಿದೆ ಎಂದು ತಿಳಿಸಿದರು.

ಇಂದು ಐತಿಹಾಸಿಕ ದಿನವಾಗಿದೆ. ಈ ಐತಿಹಾಸಿಕ ಕ್ಷಣದ ಭಾಗವಾಗಿರಲು ನಾನು ಹೆಮ್ಮೆಪಡುತ್ತೇನೆ. ನಾವು ಹೊಸ ಸಂಸತ್ತಿನ ಕಟ್ಟಡಕ್ಕೆ ಹೋಗುತ್ತಿದ್ದೇವೆ ಮತ್ತು ಈ ಭವ್ಯ ಸೌಧವು ಹೊಸ ಭಾರತದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದರು. ನಾನು ಏಳು ಪ್ರಧಾನ ಮಂತ್ರಿಗಳು ಮತ್ತು ದೇಶದ ಭವ್ಯ ಇತಿಹಾಸವನ್ನು ಕಂಡಿದ್ದೇನೆ. ಸ್ವತಂತ್ರ ಸದಸ್ಯಳಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಸೇರಿದ್ದೇನೆ ಎಂದು ತಮ್ಮ ರಾಜಕೀಯ ಜೀವನವನ್ನು ನೆನಪಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು