ನವದೆಹಲಿ: ಜಿ.20 ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಫ್ರಿಕನ್ ಯೂನಿಯನ್ ರಾಷ್ಟ್ರಗಳ ಸದಸ್ಯರನ್ನು ಸ್ವಾಗತಿಸಿದರು. ಸದಸ್ಯರಾಗುವಂತೆ ಎಯು ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರನ್ನು ಪಿಎಂ ಮೋದಿ ಸಭೆಗೆ ಆಹ್ವಾನಿಸಿದರು, ಅವರನ್ನು ತಬ್ಬಿಕೊಂಡು ಜಿ 20 ಗೆ ಸ್ವಾಗತಿಸಿದರು.
ಜಿ 20 ನಾಯಕರ 18 ನೇ ಶೃಂಗಸಭೆಯ ಆರಂಭಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಜಗತ್ತು ಎದುರಿಸುತ್ತಿರುವ “ವಿಶ್ವಾಸಾರ್ಹ ಕೊರತೆಯ ದೊಡ್ಡ ಬಿಕ್ಕಟ್ಟನ್ನು ಉಲ್ಲೇಖಿಸಿದರು. ಕೋವಿಡ್ ಬಳಿಕ ಜಗತ್ತಿನ ದೇಶಗಳ ನಡುವೆ ವಿಶ್ವಾಸದ ಕೊರತೆ ಕಾಡುತ್ತಿದೆ. ಇದು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ತೀವ್ರಗೊಂಡಿದೆ ಎಂದು ಅವರು ಹೇಳಿದರು.
ಮೊರಾಕೊದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಪ್ರಾಣ ಕಳೆದುಕೊಂಡವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಅವರು, ಈ ಕಷ್ಟದ ಸಮಯದಲ್ಲಿ ಇಡೀ ವಿಶ್ವ ಸಮುದಾಯವು ಮೊರಾಕೊದೊಂದಿಗೆ ನಿಂತಿದೆ ಎಂದು ಹೇಳಿದರು.
21 ನೇ ಶತಮಾನವು ಜಗತ್ತಿಗೆ ಹೊಸ ದಿಕ್ಕನ್ನು ತೋರಿಸಲು ನಿರ್ಣಾಯಕ ಸಮಯ ಎಂದು ಹೇಳಿದ ಮೋದಿ ವರ್ಷಗಳ ಹಳೆಯ ಸಮಸ್ಯೆಗಳು ನಮ್ಮಿಂದ ಹೊಸ ಪರಿಹಾರಗಳನ್ನು ಹುಡುಕುತ್ತಿರುವ ಸಮಯವಾಗಿದೆ. ಆದ್ದರಿಂದ, ನಾವು ಈ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದರು.