ದೆಹಲಿ: ʻಗೂಗ್ಲಿʼ ಸಿನಿಮಾದ ಮೂಲಕ ಎಲ್ಲರ ಗಮನೆ ಸೆಳೆದಿದ್ದ ನಟಿ ಕೃತಿ ಕರಬಂಧ ಅವರು ಸಾಮ್ರಟ್ ಪುಲ್ಕಿತ್ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದೀಗ ಇವರ ಮದುವೆ ಸಂಭ್ರದದ ಫೋಟೋಗಳು ವೈರಲ್ ಆಗಿವೆ. ಹಿಂದೂ ಸಂಪ್ರದಾಯದಲ್ಲಿ ವಿವಾಹ ಸಂಪನ್ನಗೊಂಡಿದ್ದು ಮದುವೆಯಲ್ಲಿ ಆಪ್ತರು ಹಾಗೂ ಕುಟುಂಬದವರು ಮಾತ್ರ ಈ ಮದುವೆಗೆ ಆಗಮಿಸಿದ್ದರು. ದೆಹಲಿಯ ಐಟಿಸಿ ಗ್ರ್ಯಾಂಡ್ ಭಾರತ್ನಲ್ಲಿ ಈ ವಿವಾಹ ನಡೆದಿದೆ.
ಕೃತಿ ಹಾಗೂ ಪುಲ್ಕಿತ್ ‘ಪಾಗಲ್ಪಂತಿ’ ಚಿತ್ರದ ಸೆಟ್ನಲ್ಲಿ ಭೇಟಿ ಆದರು. ಈ ವರ್ಷದ ಆರಂಭದಲ್ಲಿ ಇವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದೀಗ ವಿವಾಹವಾಗಿ ಪೋಟೋಗಳನ್ನು ಸಾಮಾಜಿ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.
ಕೃತಿ ಕನ್ನಡ, ಹಿಂದಿ, ಹೀಗೆ ಮೊದಲಾದ ಸಿನಿಮಾಗಳಲ್ಲಿ ನಟಿಸಿ ತಮ್ಮ ನಟನೆ ಮತ್ತು ಅಂದದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕನ್ನಡದ ಗೂಗ್ಲಿ ಸಿನಿಮಾದ ಮೂಲಕ ಹೆಚು ಗಮನ ಸೆಳೆದಿದ್ದರು.