Categories: ದೆಹಲಿ

ನವದೆಹಲಿ: ಮಂಗಳೂರಿಗೆ ಖಾದರ್, ಬೈಂದೂರಿಗೆ ಗೋಪಾಲ ಪೂಜಾರಿ, ಕಾಪುವಿನಿಂದ ಸೊರಕೆ

ನವದೆಹಲಿ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಆದರೆ ಪಟ್ಟಿ ಯುಗಾದಿ ಬಳಿಕ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಮಂಗಳೂರಿನಿಂದ ಹಾಲಿ ಶಾಸಕ ಯು.ಟಿ. ಖಾದರ್ ಹಾಗೂ ಬೈಂದೂರಿನಿಂದ ಗೋಪಾಲ ಪೂಜಾರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಕಾಪು ಕ್ಷೇತ್ರದಿಂದ ವಿನಯಕುಮಾರ್ ಸೊರಕೆ ಹೆಸರು ಮುಂಚೂಣಿಯಲ್ಲಿದೆ.

ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕೇಂದ್ರ ಚುನಾವಣ ಸಮಿತಿಯು 3 ಗಂಟೆ ಅ ಹೆಚ್ಚುಕಾಲ ಸಭೆ ನಡೆಸಿ ಸ್ಕ್ರೀನಿಂಗ್‌ ಕಮಿಟಿಯು ಶಿಫಾರಸು ಮಾಡಿದ್ದ ಪಟ್ಟಿ ಕುರಿತು ಚರ್ಚೆ ನಡೆಸಿತು. ಕಾಂಗ್ರೆಸ್‌ ನ 60 ಹಾಲಿ ಶಾಸಕರ ಪೈಕಿ ಐದಾರು ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದವರೆಲ್ಲರಿಗೂ ಟಿಕೆಟ್ ಖಾತರಿಯಾಗಿದೆ.

ಇವರೆಲ್ಲರಿಗೆ ಟಿಕೇಟ್‌ ನಿಶ್ಚಿತ: ಅಶೋಕ ಪಟ್ಟಣ-ರಾಮದುರ್ಗ, ಉಮಾಶ್ರೀ- ತೇರದಾಳ, ಜಿ.ಟಿ. ಪಾಟೀಲ್-ಬೆಳಗಿ, ವಿಜಯಾನಂದ ಕಾಶಪ್ಪನವರ್-ಹುನಗುಂದ, ಡಾ. ಶರಣ ಪ್ರಕಾಶ್ ಮರ- ಸೇಡಂ, ಬಿ.ಆರ್. ಪಾಟೀಲ್‌ -ಆಳಂದ, ಲಿಂಗಸುಗೂರು- ರುದ್ರಯ್ಯ, ಹಂಪನಗೌಡ ಬಾದರ್ಲಿ ಸಿಂಧನೂರು, ಶಿವರಾಜ ತಂಗಡಗಿ-ಕನಕಗಿರಿ: ಬಸವರಾಜ ರಾಯರೆಡ್ಡಿ, ಯಲಬುರ್ಗಾ, ಮೋಹನ ಲಿಂಬಿಕಾಯಿ- ಧಾರವಾಡ ಪರ್ವ, ಸಂತೋಷ್ ಲಾಡ್-ಕಲಘಟಗಿ, ಸತೀಶ್ ಸೈಲ್ ಕಾರವಾರ, ನಿವೇದಿತಾ ಆಳ್ವ ಕುಮಟಾ, ಭೀಮಣ್ಣ ನಾಯಕ- ಶಿರಸಿ, ವಿ.ಎಸ್‌. ಪಾಟೀಲ್ – ಯಲ್ಲಾ ಸ್ಪರ, ಯು.ಬಿ. ಬಣಕಾರ, ಹಿರೇಕೆರೂರು, ಪ್ರಕಾಶ ಕೋಳಿವಾಡ- ರಾಣಿಬೆನ್ನೂರು, ಪ್ರಸನ್ನಕುಮಾರ್ – ಶಿವಮೊಗ್ಗ ಮಧು ಬಂಗಾರಪ್ಪ ಸೊರಬ, ಗೋಪಾಲ ಪೂಜಾರಿ- ಬೈಂದೂರು, ವೈ.ಎಸ್.ವಿ ದತ್ತಾ, ಕಡೂರು, ಕಿರಣ್ ಕುಮಾರ್ -ಚಿಕ್ಕನಾಯಕನಹಳ್ಳಿ, ಟಿ.ಬಿ. ಜಯಚಂದ್ರ- ಶಿಲಾ, ಶ್ರೀನಿವಾಸ್ -ಗುಬ್ಬಿ, ರಾಜಣ್ಣ, ದುರುಗಿರಿ, ಡಾ. ಎಂ.ಸಿ. ಸುಧಾಕರ್ – ಚಿಂತಾಮಣಿ, ಸುಮಾ ಹನುಮಂತರಾಯಪ್ಪ- ರಾಜರಾಜೇಶ್ವರಿ ನಗರ, ಗಣೇಶ್ ಪ್ರಸಾದ್- ಗುಂಡ್ಲುಪೇಟೆ ಯು.ಬಿ. ವಂಕಟೇಶ್ – ಬಸವನಗುಡಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿವೆ

Sneha Gowda

Recent Posts

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

4 mins ago

ನಂಜನಗೂಡು ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ: ವಿದ್ಯಾರ್ಥಿನಿ ಬಾಂಧವ್ಯ ತಾಲೂಕಿಗೆ ಪ್ರಥಮ ‌

ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…

21 mins ago

ಲೋಕಸಭೆ ಚುನಾವಣೆ: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು…

49 mins ago

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು

ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ,…

1 hour ago

ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…

1 hour ago

ರೀಲ್ಸ್ ಸ್ಟಾರ್ ಗೀತಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಗೊರವಿಕಲ್ಲು ಬಡಾವಣೆಯ ಶಿಕ್ಷಕಿ, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಸ್ಟಾರ್ ಎನಿಸಿದ್ದ ಗೀತಾಶ್ರೀ ಶವ ಅವರ ಮನೆಯಲ್ಲೇ…

2 hours ago