ದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರು ಕಾರು ಕಳ್ಳತನವಾದ ಘಟನೆಯೊಂದು ವರದಿಯಾಗಿದೆ. ದೆಹಲಿಯ ಗೋವಿಂದಪುರಿಯ ಸೇವಾ ಕೇಂದ್ರದಿಂದ ಕಾರು ಕಳ್ಳತನಾಗಿದೆ ಎಂದು ಹೇಳಲಾಗುತ್ತಿದೆ.
ಮಲ್ಲಿಕಾ ನಡ್ಡಾ ಅವರು ಫಾರ್ಚೂನರ್ ಕಾರು ಬಳಸುತ್ತಿದ್ದರು. ಈ ಕಾರನ್ನು ಗೋವಿಂದಪುರಿಯ ಸರ್ವೀಸ್ ಸೆಂಟರ್ನಲ್ಲಿ ಬಿಡಲಾಗಿತ್ತು. ಆದರೆ ಖದೀಮರು ಸರ್ವೀಸ್ ಸ್ಟೇಷನ್ ಬಳಿಯಿಂದಲೇ ಕಾರನ್ನು ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾರ್ಚ್ 19ರಂದು ಕಾರು ಕಳ್ಳತನವಾಗಿದೆ. ಫಾರ್ಚೂನರ್ ಕಾರು ಕಳ್ಳತನ ಬಗ್ಗೆ ಡ್ರೈವರ್ ಜೋಗಿಂದರ್ ಸಿಂಗ್ ಅದೇ ದಿನ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಸದ್ಯ ಕಾರು ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಹುಡುಕಾಡುತ್ತಿದ್ದಾರೆ.