ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ಟೆಲಿಕಾಂ ಆಪರೇಟರ್ ಸಂಸ್ಥೆ ರಿಲಾಯನ್ಸ್ ಜಿಯೋ ಡಾಟಾ ಟ್ರಾಫಿಕ್ನಲ್ಲಿ ವಿಶ್ವದ ನಂಬರ್ ಒನ್ ಎನಿಸಿದೆ. ಅಲ್ಲದೇ ಚೀನಾದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆದ ಚೀನಾ ಮೊಬೈಲ್ ಅನ್ನು ಮೀರಿಸಿ ಜಿಯೋ ಬೆಳೆದಿದೆ.
ರಿಲಾಯನ್ಸ್ ಜಿಯೋ ಮೊನ್ನೆ ಸೋಮವಾರ ತ್ರೈಮಾಸಿಕ ವರದಿಯಲ್ಲಿ ಪ್ರಕಟಿಸಿದ್ದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿರುವ ಮಾಹಿತಿ ಪ್ರಕಾರ ಜಿಯೋ ನೆಟ್ವರ್ಕ್ನಲ್ಲಿ ಒಟ್ಟಾರೆ ಡಾಟಾ ಟ್ರಾಫಿಕ್ 40.9 ಇಕ್ಸೋಬೈಟ್ ತಲುಪಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ. 35.2ರಷ್ಟು ಡಾಟಾ ಟ್ರಾಫಿಕ್ ಹೆಚ್ಚಾಗಿದೆ. ಅಲ್ಲದೇ ಜಿಯೋ 48.18 ಕೋಟಿ ಗ್ರಾಹಕ ಬಳಗವನ್ನು ಹೊಂದಿದೆ.
ಡಾಟಾ ಟ್ರಾಫಿಕ್ ಎಂದರೆ ಒಂದು ನೆಟ್ವರ್ಕ್ನಲ್ಲಿ ಬಳಕೆಯಾಗುವ ಡಾಟಾ ಪ್ರಮಾಣ. ಮೊಬೈಲ್ನಲ್ಲಿ ಡಾಟಾ ಮೂಲಕ ವೀಕ್ಷಿಸುತ್ತಿವೋ ಉದಾಹರಣೆಗೆ ಮೆಸೇಜ್, ವಿಡಿಯೋ ಇತ್ಯಾದಿ.. ಇನ್ನು, ಒಂದು ಇಕ್ಸೋಬೈಟ್ ಎಂದರೆ ಒಂದು ಲಕ್ಷ ಟಿಬಿ. ಜಿಬಿ ಲೆಕ್ಕದಲ್ಲಿ ಸುಮಾರು 100 ಕೋಟಿ ಜಿಬಿ ಡಾಟಾ ವರ್ಗಾವಣೆ ಮೂರು ತಿಂಗಳಲ್ಲಿ ಆಗಿದೆ. . ಚೀನಾ ಒನ್ ಮೊಬೈಲ್ನ ಡಾಟಾ ಟ್ರಾಫಿಕ್ಗಿಂತಲೂ ಇದು ಹೆಚ್ಚು ಎನ್ನಲಾಗಿದೆ. ಜಿಯೋದ ಈ ಸಾಧನೆಯನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಮುಕೇಶ್ ಅಂಬಾನಿ ಶ್ಲಾಘಿಸಿದ್ದಾರೆ.