News Karnataka Kannada
Tuesday, May 07 2024
ದೆಹಲಿ

ಆಸ್ಕರ್ ಪ್ರಶಸ್ತಿಗೆ ಭಾರತದ ಸಾಕ್ಷ್ಯಚಿತ್ರ ‘ಟು ಕಿಲ್ ಎ ಟೈಗರ್’ ನಾಮನಿರ್ದೇಶನ

ಜಗತ್ತಿನ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾಗಿರುವ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನ ಪ್ರಕಟಗೊಂಡಿದ್ದು, ಭಾರತ ಮೂಲದ ಕೆನಡಾದಲ್ಲಿ ನೆಲೆಸಿರುವ ನಿಶಾ ಪಹೂಜಾ ಅವರ ‘ಟು ಕಿಲ್ ಎ ಟೈಗರ್’ ಸಾಕ್ಷ್ಯಚಿತ್ರವು ನಾಮನಿರ್ದೇಶನಗೊಂಡಿದೆ. ಇದು ಈ ಹಿಂದೆ ಟೊರೆಂಟೊ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.
Photo Credit : Twitter

ದೆಹಲಿ: ಜಗತ್ತಿನ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾಗಿರುವ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನ ಪ್ರಕಟಗೊಂಡಿದ್ದು, ಭಾರತ ಮೂಲದ ಕೆನಡಾದಲ್ಲಿ ನೆಲೆಸಿರುವ ನಿಶಾ ಪಹೂಜಾ ಅವರ ‘ಟು ಕಿಲ್ ಎ ಟೈಗರ್’ ಸಾಕ್ಷ್ಯಚಿತ್ರವು ನಾಮನಿರ್ದೇಶನಗೊಂಡಿದೆ. ಇದು ಈ ಹಿಂದೆ ಟೊರೆಂಟೊ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ಕಾರ್ನಿಲಿಯಾ ಪ್ರನ್ಸಿಪೆ ಮತ್ತು ಡೇವಿಡ್ ಒಪ್ಪೆನ್ ಹಿಮ್ ನಿರ್ಮಿಸಿರುವ ಈ ಸಾಕ್ಷ್ಯಚಿತ್ರದಲ್ಲಿ 13 ವರ್ಷದ ಮಗಳನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸೆಗಿರುವ ದುರುಳರ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವ ತಂದೆಯ ಕಥೆಯನ್ನು ಇದು ಹೊಂದಿದೆ. ಭಾರತದಲ್ಲೇ ಇದು ಚಿತ್ರೀಕರಣವಾಗಿದೆ.

ಅತ್ಯುತ್ತಮ ಸಿನಿಮಾ ಪಟ್ಟಿಯಲ್ಲಿ ದಿ ಜೋನ್ ಆಫ್ ಇಂಟರೆಸ್ಟ್, ಬಾರ್ಬಿ, ಮಾಸ್ಟ್ರೊ, ಓಪನ್ ಹೈಮರ್, ಅನಾಟಮಿ ಆಫ್ ಎ ಫಾಲ್ ಸೇರಿದಂತೆ ಹಲವು ಚಿತ್ರಗಳು ಕಾಣಿಸಿಕೊಂಡಿದ್ದರೆ, ಅತ್ಯುತ್ತಮ ನಟ ವಿಭಾಗದಲ್ಲಿ ಜೆಫ್ರಿ ರೈಟ್, ಬ್ರ್ಯಾಡ್ಲಿ ಕೂಪರ್, ಪಾಲ್ ಗಿಯಾಮಟ್ಟಿ, ಕೋಲ್ಮನ್ ಡೆಮಿನಿಗೋ ಸೇರಿದಂತೆ ಹಲವು ಕಲಾವಿದರು ಇದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು