News Karnataka Kannada
Monday, April 29 2024
ದೆಹಲಿ

ವಿದೇಶಿ ಹೂಡಿಕೆಯನ್ನು ಸ್ವಾಗತಿಸುತ್ತೇವೆ, ಸ್ಥಳಿಯರಿಗೆ ಉದ್ಯೋಗಾವಕಾಶವನ್ನು ಬೆಂಬಲಿಸುತ್ತೇವೆ: ಮೋದಿ

ವಿದೇಶಿ ಹೂಡಿಕೆಯನ್ನು ಸ್ವಾಗತಿಸುವ ಭಾರತ, ದೇಶದಲ್ಲಿ ತಯಾರಾದ ಪ್ರತಿ ವಸ್ತುವಿನಲ್ಲಿ ಇಲ್ಲಿನ ಮಣ್ಣಿನ ಸೊಗಡನ್ನು ಕಾಣಲು ಬಯಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
Photo Credit : NewsKarnataka

ನವದೆಹಲಿ: ವಿದೇಶಿ ಹೂಡಿಕೆಯನ್ನು ಸ್ವಾಗತಿಸುವ ಭಾರತ, ದೇಶದಲ್ಲಿ ತಯಾರಾದ ಪ್ರತಿ ವಸ್ತುವಿನಲ್ಲಿ ಇಲ್ಲಿನ ಮಣ್ಣಿನ ಸೊಗಡನ್ನು ಕಾಣಲು ಬಯಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ʼಭಾರತದಲ್ಲಿ ವಿದೇಶಿಗರು ಹೂಡಿಕೆ ಮಾಡಬೇಕೆಂದು ನಾನು ಬಯಸುತ್ತೇನೆ. ಆ ಹೂಡಿಕೆದಾರರು ಇಲ್ಲಿನ ಜನರಿಗೆ ಉದ್ಯೋಗ ಕಲ್ಪಸುವಂತಿರಬೇಕು. ಹೀಗಾದರೆ ಭಾರತೀಯ ಯುವಕರಿಗೆ ಉದ್ಯೋಗಾವಕಾಶಗಳು ಲಭಿಸುತ್ತವೆʼ ಎಂದು ಪ್ರಧಾನಿ, ಎಲಾನ್‌ ಮಸ್ಕ್‌ರ ಟೆಸ್ಲಾ ಹಾಗು ಸ್ಟಾರ್‌ಲಿಂಕ್‌ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.

ಈ ಸಂದರ್ಭದಲ್ಲಿ ೨೦೧೫ರಲ್ಲಿ ಮಸ್ಕ್‌ರ ಫ್ಯಾಕ್ಟರಿಗೆ ಭೇಟಿ ನೀಡಿದ ಸಂದರ್ಭವನ್ನು ನೆನಪಿಸಿಕೊಂಡ ಅವರು, ಅದಕ್ಕಾಗಿ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರು ನನ್ನನ್ನು ಭೇಟಿ ಮಾಡಿದರು ಎಂದರು.

ಟೆಸ್ಲಾದ ಎಕ್ಸ್‌ ಪೋಸ್ಟ್‌ ಪ್ರಕಾರ ಮಸ್ಕ್‌ ಈ ತಿಂಗಳು ಮೋದಿಯನ್ನು ಭೇಟಿಯಾಗಲಿದ್ದು, ಭಾರತದಲ್ಲಿ ಅತಿ ದೊಡ್ಡ ಹೂಡಿಯನ್ನು ಘೋಷಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ʼಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಅನ್ಯ ದೇಶಗಳಂತೆ ವಿದ್ಯುತ್‌ ಚಾಲಿತ ವಾಹನಗಳನ್ನು ಹೊಂದುವುದು ಅಗತ್ಯʼ ಎಂದ ಮಸ್ಕ್‌, ಟೆಸ್ಲಾ ಭಾರತಕ್ಕೆ ಕಾಲಿಡುವ ಸೂಚನೆ ನೀಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು