News Karnataka Kannada
Friday, May 10 2024
ದೆಹಲಿ

ಭಾರತ ಇಟಲಿ ನಡುವೆ ಬಹುದೊಡ್ಡ ಒಪ್ಪಂದಕ್ಕೆ ಒಪ್ಪಿಗೆ

ಇಟಲಿಯಲ್ಲಿ ಬಲಪಂಥೀಯ ಸರ್ಕಾರವಿದೆ. ಇತ್ತೀಚೆಗೆ ಇಟಲಿ ಚೀನಾದ ಸಹವಾಸ ಬಿಟ್ಟು ಭಾರತದ ತೆಕ್ಕೆಗೆ ಬಿದ್ದಿದೆ. ಡಿ.27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಭಾರತ ಮತ್ತು ಇಟಲಿ ನಡುವಿನ ವಲಸೆ ಮತ್ತು ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಗೂ ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಇದು ‘ಮೆಲೋಡಿ’ ಯುಗದ ಗೆಲುವು. ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಯುಗ ಆರಂಭ ಎಂದು ಹೇಳಲಾಗಿದೆ.
Photo Credit : News Kannada

ನವದೆಹಲಿ: ಇಟಲಿಯಲ್ಲಿ ಬಲಪಂಥೀಯ ಸರ್ಕಾರವಿದೆ. ಇತ್ತೀಚೆಗೆ ಇಟಲಿ ಚೀನಾದ ಸಹವಾಸ ಬಿಟ್ಟು ಭಾರತದ ತೆಕ್ಕೆಗೆ ಬಿದ್ದಿದೆ. ಡಿ.27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಭಾರತ ಮತ್ತು ಇಟಲಿ ನಡುವಿನ ವಲಸೆ ಮತ್ತು ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಗೂ ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಇದು ‘ಮೆಲೋಡಿ’ ಯುಗದ ಗೆಲುವು. ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಯುಗ ಆರಂಭ ಎಂದು ಹೇಳಲಾಗಿದೆ.

ಈ ಒಪ್ಪಂದವು ಜನರ ಸಂಪರ್ಕವನ್ನು ಹೆಚ್ಚಿಸುತ್ತದೆ, ವಿದ್ಯಾರ್ಥಿಗಳು, ನುರಿತ ಕೆಲಸಗಾರರು, ವ್ಯಾಪಾರಸ್ಥರು ಮತ್ತು ಯುವ ವೃತ್ತಿಪರರ ಚಲನಶೀಲತೆಯನ್ನು ಉತ್ತೇಜಿಸುತ್ತದೆ. ಹಾಗೂ ಅನಿಯಮಿತ ವಲಸೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಹಕಾರವನ್ನು ಬಲಪಡಿಸುತ್ತದೆ ಎಂದು ಹೇಳಲಾಗಿದೆ. ವಲಸೆ ಮತ್ತು ಚಲನಶೀಲತೆಯ ಕುರಿತಾದ ಭಾರತ-ಇಟಲಿ ಒಪ್ಪಂದವು ಐದು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ. ಇದು ಯಾವುದೇ ಸರ್ಕಾರ ಬದಲಾವಣೆಯಾದರೂ ಮುಂದುವರಿಯುತ್ತದೆ ಎಂದು ಹೇಳಿದೆ. ಈಗಾಗಲೇ ಈ ಒಪ್ಪಂದ ಪ್ರಕಾರ ಅನೇಕ ವಿಚಾರಗಳನ್ನು ನವೀಕರಿಸಲಾಗಿದೆ. ಪ್ರಸ್ತುತ ಇಟಾಲಿಯನ್ ವೀಸಾ ಆಡಳಿತದಲ್ಲಿ ಪೋಸ್ಟ್-ಸ್ಟಡಿ ಅವಕಾಶಗಳು, ಇಂಟರ್ನ್‌ಶಿಪ್‌ಗಳು ಮತ್ತು ವೃತ್ತಿಪರ ತರಬೇತಿಗಾಗಿ ಕಾರ್ಯವಿಧಾನಗಳನ್ನು ಒಳಗೊಂಡಿದೆ.

ನವೆಂಬರ್ 2ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಇಟಲಿಯ ವಿದೇಶಾಂಗ ವ್ಯವಹಾರಗಳು ಹಾಗೂ ಅಂತರಾಷ್ಟ್ರೀಯ ಸಹಕಾರ ಸಚಿವ ಆಂಟೋನಿಯೊ ತಜಾನಿ ಇಟಲಿಯಲ್ಲಿ ಭೇಟಿಯಾದರು, ಈ ಸಂದರ್ಭದಲ್ಲಿ ಇಬ್ಬರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದೀಗ ಈ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಇಟಲಿಯಲ್ಲಿ ಭಾರತೀಯರು ಶೈಕ್ಷಣಿಕ/ವೃತ್ತಿಪರ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಆರಂಭಿಕ ವೃತ್ತಿಪರ ಅನುಭವವನ್ನು ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳು 12 ತಿಂಗಳವರೆಗೆ ಇಟಲಿಯಲ್ಲಿ ತಾತ್ಕಾಲಿಕ ನಿವಾಸ ಹಾಗೂ ವೀಸಾವನ್ನು ಪಡೆಯಬಹುದು. ಇದರ ಜತೆಗೆ ವೃತ್ತಿಪರ ತರಬೇತಿ, ಪಠ್ಯೇತರ ಇಂಟರ್ನ್‌ಶಿಪ್‌ಗಳು ಮತ್ತು ಪಠ್ಯಕ್ರಮ ಇಂಟರ್ನ್‌ಶಿಪ್‌ಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಹೊಂದಿದೆ. ಇದು ಭಾರತೀಯ ವಿದ್ಯಾರ್ಥಿಗಳು/ತರಬೇತಿದಾರರು ಇಟಾಲಿಯನ್ ಕೌಶಲ್ಯ/ತರಬೇತಿ ಮಾನದಂಡಗಳಲ್ಲಿ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು