ಮುಂಬೈ: ಭಾರತ ಮತ್ತು ಸೌತ್ ಆಫ್ರಿಕಾ ಮಧ್ಯೆ ಸೆಂಚೂರಿಯನ್ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. 2ನೇ ದಿನದಾಟದ ಆರಂಭಕ್ಕೂ ಮೊದಲು ಆರ್ಸಿಬಿಯ ಪುಟ್ಟ ಅಭಿಮಾನಿಗೆ ವಿರಾಟ್ ಕೊಹ್ಲಿ ಅವರು ಆಟೋಗ್ರಾಫ್ ನೀಡಿರುವುದು ಕಂಡು ಬಂದಿದೆ. ಈ ದೃಶ್ಯವನ್ನು ಆರ್ ಸಿ ಬಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
2ನೇ ದಿನದ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನಾ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ತೆಗೆದುಕೊಂಡು ಆಟೋಗ್ರಾಫ್ಗಾಗಿ ಯಂಗ್ ಫ್ಯಾನ್ ಕಾಯುತ್ತಿದ್ದನು. ಇದೇ ವೇಳೆ ವಿರಾಟ್ ಕೊಹ್ಲಿಯವರು ವಾರ್ಮ್ಗೆಂದು ಮೈದಾನಕ್ಕೆ ಇಳಿದಿದ್ದರು. ಯುವ ಅಭಿಮಾನಿಯನ್ನು ಮಾತನಾಡಿಸಿದ ವಿರಾಟ್ ಕೊಹ್ಲಿ ಆರ್ಸಿಬಿ ಜೆರ್ಸಿಯ ಮೇಲೆ ಆಟೋಗ್ರಾಫ್ ಹಾಕಿದ್ದಾರೆ.
ಇದಾದ ಮೇಲೆ ಫೋಟೋಬೇಕು ಎಂದು ಬಾಲಕ ಕೇಳಿದ್ದರಿಂದ ವಿರಾಟ್ ಕೊಹ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ, ಸ್ಟೇಡಿಯಂನಲ್ಲಿ ಕೆಲವರು ಆರ್ಸಿಬಿ ಜೆರ್ಸಿಯನ್ನು ಧರಿಸಿಕೊಂಡು ಬಂದಿರುವುದು ಕಂಡು ಬಂದಿದ್ದು ಕುತೂಹಲಕ್ಕೆ ಕಾರಣವಾಯಿತು.
He's going to treasure that one for life 🥹
No matter where he goes, The King's always got time for the 12th Man Army 🫶 👑#PlayBold #SAvIND #TeamIndia @imVkohli
— Royal Challengers Bengaluru (@RCBTweets) December 27, 2023