ನವದೆಹಲಿ: ಭಾರತದ ಒಟ್ಟು ರಾಷ್ಟ್ರೀಯ ಆದಾಯ ಹಾಗು ಜೀವಿತಾವಧಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಧಾರಣೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ಮಾಡಿದೆ.
ನಿರೀಕ್ಷಿತ ವರ್ಷಗಳ ಶಾಲಾ ಶಿಕ್ಷಣದಲ್ಲಿಯೂ ಹೆಚ್ಚಳವಾಗಿರುವುದನ್ನು ವರದಿ ಬಹಿರಂಗಪಡಿಸಿದೆ.
ಮಾನವ ಅಭಿವೃದ್ಧಿ ಸೂಚ್ಯಂಕ 2022ರಲ್ಲಿ 0.644ರಷ್ಟಿದ್ದು, ಭಾರತ 193ರಲ್ಲಿ 134 ಸ್ಥಾನದಲ್ಲಿತ್ತು. ಇದನ್ನು ಮಧ್ಯಮ ಮಾನವ ಅಭಿವೃದ್ಧಿ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ ದೀರ್ಘ ಹಾಗು ಆರೋಗ್ಯಕರ ಜೀವನ, ಶಿಕ್ಷಣ ಅವಕಾಶ ಮತ್ತು ಯೋಗ್ಯ ಜೀವನ ಮಟ್ಟಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಲಿಂಗ ಅಸಮಾನತೆಯ ವರದಿಯಲ್ಲಿ ಲಿಂಗ ಆಧಾರಿತ ಭೇದಗಳು ಕ್ಷೀಣಿಸುತ್ತಿದೆಯೆಂದು ವರದಿಯಾಗಿದೆ. ಇದನ್ನು ಅಳೆಯಲು ಸಂತಾನೋತ್ಪತ್ತಿ ಆರೋಗ್ಯ, ಸಬಲೀಕರಣ ಮತ್ತು ಕಾರ್ಮಿಕ ಮಾರುಕಟ್ಟೆ ಭಾಗವಹಿಸುವಿಕೆಯನ್ನು ಪರಿಗಣಿಸಲಾಗಿದ್ದು, 166 ದೇಶಗಳಲ್ಲಿ ಭಾರತ 108ನೇ ಸ್ಥಾನದಲ್ಲಿದೆ.