News Karnataka Kannada
Wednesday, May 08 2024
ದೆಹಲಿ

ಪ್ರಧಾನಿಗೆ ಮುಜುಗರವುಂಟು ಮಾಡುವ ಪ್ರತಿಭಟನೆ ನಡೆಸಲು ವಿರೋಧಿಗಳಿಗೆ ಕುಮ್ಮಕ್ಕು

Uttar Pradesh: PM to visit Varanasi today, launch various projects
Photo Credit : News Kannada

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ವಾರಾಂತ್ಯಕ್ಕೆ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಅವರಿಗೆ ಮುಜುಗರವುಂಟುಮಾಡಲು ಖಲಿಸ್ತಾನ್‌ ಪ್ರತ್ಯೇಕವಾದಿಗಳ ಜತೆ ಸೇರಿ ಪಾಕಿಸ್ತಾನ ಸಂಚು ರೂಪಿಸಿರುವ ಷಡ್ಯಂತ್ರವೊಂದನ್ನು ಗುಪ್ತಚರ ಪಡೆ ಪತ್ತೆಹಚ್ಚಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಖಲಿಸ್ತಾನ್ ಪರ ಸಂಘಟನೆಗಳು ಮತ್ತು ಗುಂಪುಗಳೊಂದಿಗೆ ಭಾರತದ ವಿರುದ್ಧ ತಂತ್ರ ಹೆಣೆಯಲು ಗೌಪ್ಯ ಸಭೆಗಳನ್ನು ಮಾಡಿದೆ. ಪ್ರಧಾನಮಂತ್ರಿ ಮೋದಿ ಅಮೆರಿಕ ಭೇಟಿಯನ್ನು ವಿರೋಧಿಸಲು ಪಾಕಿಸ್ತಾನದ ಐಎಸ್‌ಐ ಕಳೆದ ಹಲವು ದಿನಗಳಿಂದ ಅಮೆರಿಕದಲ್ಲಿ ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೆಲವು ಗುಂಪುಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಜತೆಗೆ ಮೇಲಿಂದ ಮೇಲೆ ಸಭೆ ನಡೆಸುತ್ತಿದೆ. ಈ ಮೂಲಕ ಭಾರತದ ವಿರುದ್ಧದ ಪಿತೂರಿ ನಡೆಸಲು ಒಂದಷ್ಟು ಗುಂಪು/ಸಂಸ್ಥೆಗಳಿಗೆ ಹಣ ಕೂಡ ನೀಡಿದೆ ಎನ್ನಲಾಗಿದೆ.

ಮೋದಿ ಅವರ ಜತೆಗೆ ಅಮೆರಿಕ ಅಧ್ಯಕ್ಷರು ಯಾವ ವಿಚಾರ ಚರ್ಚಿಸಲಿದ್ದಾರೆ. ಭೇಟಿ ವೇಳೆ ಏನೆಲ್ಲ ಕಾರ್ಯಕ್ರಮ ನಡೆಯಲಿವೆ. ಮೋದಿಯನ್ನು ಸ್ವಾಗತಿಸಲು ಯಾವ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂಬ ಅಂಶಗಳ ಬಗ್ಗೆ ಪಾಕಿಸ್ತಾನ ಸಾಕಷ್ಟು ಚಿಂತೆ ಮಾಡುತ್ತಿದೆ. ಎರಡು ದೇಶಗಳ ಚಲನವನಗಳ ಮೇಲೆ ನಿಗಾ ಇಡುತ್ತಿದೆ ಎಂದು ವರದಿಗಳು ತಿಳಿಸಿವೆ.

ಅಮೆರಿಕ ಭೇಟಿ ವೇಳೆ ಮೋದಿಯನ್ನು ಭಂಗಪಡಿಸಲು ಐಎಸ್ಐ ಈಗಾಗಲೇ ಟೂಲ್‌ಕಿಟ್ ಸಿದ್ಧಪಡಿಸಿದ್ದು, ಈ ಟೂಲ್‌ಕಿಟ್‌ನಲ್ಲಿ ಭಾರತವನ್ನು ಯಾವ ರೀತಿಯಲ್ಲಿ ವಿರೋಧಿಸಬೇಕು ಮತ್ತು ಯಾವ ಸ್ಥಳಗಳಲ್ಲಿ ಪ್ರತಿಭಟಿಸಬೇಕು ಎಂಬುದರ ಕುರಿತು ಯೋಜನೆ ರೂಪಿಸಲಾಗಿದೆ.

ಪ್ರತಿಭಟನೆ ವೇಳೆ ಯಾವ ಪೋಸ್ಟರ್‌ಗಳನ್ನು ಬಳಸಬೇಕು ಎಂಬುದಕ್ಕೂ ಸಿದ್ಧತೆ ನಡೆಸಲಾಗಿದ್ದು, ಪ್ರತಿಭಟನೆಯ ಜವಾಬ್ದಾರಿ ನೀಡಿದವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ಯಲು ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಭಾರತದ ವಿರುದ್ಧ ಷಡ್ಯಂತ್ರ ನಡೆಸಲು ವಿಶೇಷ ವೆಬ್‌ಸೈಟ್ ಕೂಡ ರಚಿಸಲಾಗಿದೆ. ಈ ವೆಬ್‌ಸೈಟ್‌ನಲ್ಲಿ ಭಾರತದ ವಿರುದ್ಧದ ಷಡ್ಯಂತ್ರವನ್ನು ನಡೆಸಲು ಜನರು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು