News Karnataka Kannada
Monday, April 29 2024
ದೆಹಲಿ

ಮೆಹ್ರೌಲಿ ಕಟ್ಟಡ ನೆಲಸಮಕ್ಕೆ ನೋಟಿಸ್‌: ಅಫಿಡವಿಟ್ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ

HC asks DDA, DUSIB to file affidavits in Mehrauli demolition drive case
Photo Credit : IANS

ಹೊಸದಿಲ್ಲಿ, ಫೆ.18: ಗೌಶಿಯಾ ಕಾಲೋನಿಯಲ್ಲಿ ಮನೆಗಳ ನೆಲಸಮ ಕುರಿತಂತೆ ಗೋಶಿಯಾ ಕಾಲೋನಿ ಸೇವಾ ಸಮಿತಿ ಮತ್ತು ಇತರರು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಫೆ.21ರೊಳಗೆ ಅಫಿಡವಿಟ್ ಸಲ್ಲಿಸುವಂತೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ) ಮತ್ತು ದಿಲ್ಲಿ ನಗರ ಆಶ್ರಯ ಸುಧಾರಣಾ ಮಂಡಳಿ(ಡಿಯುಎಸ್ಐಬಿ)ಗೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ನಿರ್ದೇಶಿಸಿದೆ.

ವಕೀಲ ಅನುಪ್ರದಾ ಸಿಂಗ್ ಅವರ ಮೂಲಕ ಸಲ್ಲಿಸಿದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಮೂರು ದಿನಗಳಲ್ಲಿ ತನ್ನ ಪ್ರತಿಕ್ರಿಯೆ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿದರು.

ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆ.28ಕ್ಕೆ ನಿಗದಿಪಡಿಸಿದೆ.

ಐದು ದಶಕಗಳಿಂದ ಅಸ್ತಿತ್ವದಲ್ಲಿರುವ ಮತ್ತು ಸುಮಾರು 4,000 ಜನಸಂಖ್ಯೆಯನ್ನು ಹೊಂದಿರುವ 600 ಕ್ಕೂ ಹೆಚ್ಚು ಮನೆಗಳನ್ನು ಒಳಗೊಂಡಿರುವ ಇಡೀ ಗೋಶಿಯಾ ಕಾಲೋನಿಯಲ್ಲಿ ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ನಡೆಸಲು ಡಿಡಿಎ ಉದ್ದೇಶಿಸಿದ್ದು, ಈ ಬಗ್ಗೆ ವಿಚಾರಣೆ ನಡೆದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು