News Karnataka Kannada
Friday, May 03 2024
ದೆಹಲಿ

ಚಿನ್ನ ಬೆಳ್ಳಿ ಬೆಲೆ ಮತ್ತೆ ಏರಿಕೆ : 10 ಗ್ರಾಂ ಚಿನ್ನದ ಬೆಲೆ ರೂ1,070 ರಷ್ಟು ಹೆಚ್ಚಳ

ಈಗಂತು ಚಿನ್ನ ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಇದರಿಂದಾಗಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ರೂ 1,070ರಷ್ಟು ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೂ 68,420ಕ್ಕೆ ಸೋಮವಾರ ಮಾರಟವಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಹೇಳಿದೆ.
Photo Credit : NewsKarnataka

ನವದೆಹಲಿ: ಈಗಂತು ಚಿನ್ನ ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಇದರಿಂದಾಗಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ರೂ 1,070ರಷ್ಟು ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೂ 68,420ಕ್ಕೆ ಸೋಮವಾರ ಮಾರಟವಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಹೇಳಿದೆ.

ಇನ್ನೇನು ಚಿನ್ನ ಬೆಳ್ಳಿ ಬೆಲೆಯಲ್ಲಿ ಚೇತರಿಕೆ ಕಂಡ ಬೆನ್ನಲ್ಲೇ ಈಗ ಮತ್ತೆ ಏರಿಕೆ ಕಂಡಿದೆ. ಹಿಂದಿನ ಮಾರಟದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಮ್‌ ಗೆ ರೂ 67,350ರಷ್ಟು ದಾಖಲಾಗಿತ್ತು.

ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು ಪ್ರತಿ ಕೆ.ಜಿಗೆ ರೂ 1.120ರಷ್ಟು ಹೆಚ್ಚಳವಾಗಿದೆ. ಈ ಹಿಂದೆ ಪ್ರತಿ ಕೆ.ಜಿ ಬೆಳ್ಳಿ ಬೆಲೆ ರೂ 77,450ರಷ್ಟಿತ್ತು. ಸೋಮವಾರ ಇದು ರೂ 78,570 ಏರಿಕೆಯಾಗಿದೆ.
ʻಬಡ್ಡಿ ದರ ಇಳಿತಕ್ಕೆ ಅಮೆರಿಕದ ಫೆಡರಲ್‌ ರಿಸರ್ವ್‌ ಕ್ರಮ ಕೈಗೊಂಡ ಬೆನ್ನಲ್ಲೇ ಚಿನ್ನದ ಬಲೆ ಏರಿಕೆ ಕಂಡಿದೆ. ಇದರ ಜತೆಯಲ್ಲಿ ಚೀನಾದಿಂದಲೂ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ವಿಶ್ಲೇಷಕ ದಿಲೀಪ್‌ ಪಾರ್ಮಾರ್‌ ತಿಳಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಬೌನ್ಸ್‌ಗೆ 2,265.73 ಅಮೆರಿಕನ್‌ ಡಾಲರ್‌ನಷ್ಟಾಗಿದೆ. ಹೀಗಾಗಿ ಎಂಸಿಎಕ್ಸ್‌ ಪ್ಯೂಚರ್‌ನಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ ರೂ 69,487ರಷ್ಟು ದಾಖಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು