ದೆಹಲಿ: ಐಪಿಎಲ್ 2024ರ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸುವ ಮೂಲಕ ಗೆಲುವಿನ ಆರಂಭವನ್ನು ಮಾಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು.
ಡೆಲ್ಲಿ ನೀಡಿದ 174 ರನ್ಗಳ ಟಾರ್ಗೆಟ್ ಬೆನ್ನು ಹತ್ತಿದ ಪಂಬಾಜ್ ಕಿಂಗ್ಸ್ 4 ವಿಕೆಟ್ಗಳ ಜಯ ಸಾಧಿಸಿದೆ. ಪಂಜಾಬ್ ಕಿಂಗ್ಸ್ ಪರ ನಾಯಕ ಶಿಖರ್ ಧವನ್ (22 ರನ್) ಹಾಗೂ ಜಾನಿ ಬೈರ್ಸ್ಟೋ (9 ರನ್) ವೇಗದ ಆರಂಭ ನೀಡಿದರು.
ಆ ನಂತರ ಜೊತೆಯಾದ ಪ್ರಭಾಸಿಮ್ರಾನ್ ಸಿಂಗ್ (26 ರನ್) ಹಾಗೂ ಸ್ಯಾಮ್ ಕರನ್ (63 ರನ್) ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ಇಬ್ಬರು ತಂಡವನ್ನು ಶತಕದ ಸನಿಹಕ್ಕೆ ತಂದರು. ಆದರೆ ಪ್ರಭಾಸಿಮ್ರಾನ್ ವಿಕೆಟ್ ಬಳಿಕ ಬಂದ ಜಿತೇಶ್ ಶರ್ಮಾ (9 ರನ್) ಹಾಗೂ ಶಶಾಂಕ್ ಸಿಂಗ್ ಬೇಗನೇ ವಿಕೆಟ್ ಒಪ್ಪಿಸುವ ಮೂಲಕ ತಂಡವನ್ನು ಮತ್ತೆ ಹಿನ್ನಡೆಗೆ ತಳ್ಳಿದರು. ನಂತರ ಕರನ್ ಜೊತೆಯಾದ ಲಿಯಾಮ್ ಲಿವಿಂಗ್ಸ್ಟೋನ್ ಔಟಾಗದೆ 38 ಮತ್ತು ಹರ್ಪ್ರೀತ್ ಬ್ರಾರ್ 2 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.