News Karnataka Kannada
Friday, May 03 2024
ದೆಹಲಿ

‘ಡಾಬರ್ ಇಂಡಿಯಾ’ ಉತ್ಪನ್ನಗಳು ಕ್ಯಾನ್ಸರ್ ಗೆ ಕಾರಣ: ಕಂಪನಿಯ ವಿರುದ್ಧ ಬಿತ್ತು ಕೇಸ್

Dabur India products cause cancer: Case filed against company
Photo Credit : IANS

ದೆಹಲಿ: ಡಾಬರ್ ಸಂಸ್ಥೆಯ ಹೇರ್ ರಿಲ್ಯಾಕ್ಸ್ ಉತ್ಪನ್ನಗಳ ಬಳಕೆಯಿಂದಾಗಿ ಅಂಡಾಶಯದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಆರೋಪ ಮಾಡಲಾಗಿದೆ. ಯುಎಸ್ ಮತ್ತು ಕೆನಡಾದಲ್ಲಿ ಡಾಬರ್‌ನ ಅಂಗಸಂಸ್ಥೆಗಳ ವಿರುದ್ಧ ಈ ಬಗ್ಗೆ ಗ್ರಾಹಕರು ಮೊಕದ್ದಮೆ ಹೂಡಿದ್ದಾರೆ.

ಇದಾದ ನಂತರ ಡಾಬರ್ ಇಂಡಿಯಾ ಷೇರುಗಳು ಬಿಎಸ್‌ಇಯಲ್ಲಿ ವಹಿವಾಟಿನಲ್ಲಿ ಸುಮಾರು ಶೇಕಡ 1.62 ರಷ್ಟು ಕುಸಿದು ಪ್ರತಿ ಷೇರಿಗೆ 525.50 ಕ್ಕೆ ತಲುಪಿದೆ. ಬಿಗ್ ಕ್ಯಾಪ್‌ನ ಎಫ್‌ಎಂಸಿಜಿ ಕಂಪನಿಯು ತನ್ನ ಅಂಗಸಂಸ್ಥೆಗಳಾದ ನಮಸ್ತೆ ಲ್ಯಾಬೊರೇಟರೀಸ್, ಡರ್ಮೊವಿವಾ ಸ್ಕಿನ್ ಎಸೆನ್ಷಿಯಲ್ಸ್ ಮತ್ತು ಡಾಬರ್ ಇಂಟರ್‌ನ್ಯಾಶನಲ್ ಸೇರಿದಂತೆ ಹಲವಾರು ಕಂಪನಿಗಳ ವಿರುದ್ಧ ಸರಿಸುಮಾರು 5,400 ಪ್ರಕರಣಗಳಿವೆ ಎಂದು ಹೇಳಿದೆ.

ಡಾಬರ್ ಉತ್ಪನ್ನಗಳಿಂದ ಕ್ಯಾನ್ಸರ್ ಬರುತ್ತದೆ ಎಂಬ ಆರೋಪದ ವರದಿಗಳ ಬಳಿಕ ಕಂಪನಿಯ ಷೇರುಗಳು ನಿರಂತರವಾಗಿ ಕುಸಿತ ಕಂಡಿದೆ. ಡಾಬರ್ ಇಂಡಿಯಾ ಷೇರುಗಳು ಕಳೆದ 2 ವಾರಗಳಲ್ಲಿ ಶೇಕಡ 4.59 ರಷ್ಟು ಕುಸಿತವನ್ನು ಕಂಡಿದೆ. ಕಳೆದ 1 ತಿಂಗಳ ಅವಧಿಯಲ್ಲಿ ಸುಮಾರು ಶೇ.7 ರಷ್ಟು ಕುಸಿತ ಕಂಡಿದೆ ಎಂದು ವರದಿಯಾಗಿದೆ.

ಡಾಬರ್ ಇಂಡಿಯದ ಕೂದಲು ನಯಕಾರಕ ಉತ್ಪನ್ನಗಳು ಕೆಲವು ರಾಸಾಯನಿಕಗಳನ್ನು ಒಳಗೊಂಡಿದ್ದು, ಬಳಕೆದಾರರಲ್ಲಿ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಮೊಕದ್ದಮೆಗಳಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಈ ಆರೋಪಗಳನ್ನು ತಾನು ಪ್ರಶ್ನಿಸಿದ್ದೇನೆ ಮತ್ತು ಕೆಲವು ಪ್ರಕರಣಗಳಲ್ಲಿ ಹೆಚ್ಚಿನ ಮಾಹಿತಿ ಮತ್ತು ದಾಖಲೆಗಳನ್ನು ಕೋರಿದ್ದೇನೆ ಎಂದು ಡಾಬರ್ ಇಂಡಿಯ ಹೇಳಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 2.5 / 5. Vote count: 2

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು