ನವದೆಹಲಿ: ಕೇಂದ್ರ ಸರ್ಕಾರದ ಪಿಎಲ್ಐ ಯೋಜನೆಗಳ ನಿಯಮದ ಫಲವಾಗಿ ಚೀನಾದ ಮೊಬೈಲ್ ಉತ್ಪಾದಕ ಕಂಪನಿ ಬಿಬಿಕೆ ಗ್ರೂಪ್ ಭಾರತೀಯ ಉತ್ಪಾದಕರೊಂದಿಗೆ ಕೈಜೋಡಿಸಲು ಒಪ್ಪಿಗೆ ನೀಡಿದ್ದು, ಒಪ್ಪೋ, ವಿವೋ ಹಾಗೂ ರಿಯಲ್ ಮೀ ಸ್ಮಾರ್ಟ್ ಫೋನ್ಗಳ ಉತ್ಪಾದನೆ ಡಿಕ್ಸಾನ್ ಟೆಕ್ನಾಲಜೀಸ್ ಹಾಗೂ ಕಾರ್ಬನ್ ಗ್ರೂಪ್ ಕಂಪನಿಗಳೊಂದಿಗೆ ಮಾಡಲಿವೆ.
ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ ಯೋಜನೆಯನ್ನು ಪಡೆಯಲು ಸ್ಥಳೀಯ ಉತ್ಪಾದಕ ಕಂಪನಿಗಳನ್ನು ತನ್ನ ಪಾಲುದಾರರನ್ನಾಗಿ ಮಾಡಿಕೊಳ್ಳುವುದು ಕಡ್ಡಾಯ.
ಈಗಾಗಲೇ ಭಾರತದಲ್ಲಿ ದೊಡ್ಡ ಉತ್ಪಾದನಾ ಘಟಕಗಳನ್ನು ಹೊಂದಿರುವ ಒಪ್ಪೋ ಮತ್ತು ವಿವೋ, ಬಿಬಿಕೆ ಗ್ರೂಪ್ ಬ್ರಾಂಡ್ಗಳ ಸಂಪೂರ್ಣ ಶ್ರೇಣಿಯ ಮೊಬೈಲ್ಗಳಾದ ಒಪ್ಪೋ, ವಿವೋ, ರಿಯಲ್ಮೀ, ಒನ್ಪ್ಲಸ್ ಮತ್ತು ಐಕ್ಯೂ ಸ್ಮಾರ್ಟ್ಫೋನ್ಗಳನ್ನು ಉತ್ಪಾದನೆ ಮಾಡುತ್ತಿವೆ.
ಸ್ಯಾಮ್ಸಂಗ್ ಕಂಪನಿ ಈಗಾಗಲೇ ಪಿಎಲ್ಐ ಲಾಭ ಪಡೆದುಕೊಳ್ಳುತ್ತಿರುವುದು ಚೀನೀ ಕಂಪೆನಿಗಳು ದೇಶದ ಕಾಂಟ್ರಾಕ್ಟ್ ಮ್ಯಾನುಫ್ಯಾಕ್ಟರರ್ ಜೊತೆ ಕೈಜೋಡಿಸುವುದನ್ನು ಅನಿವಾರ್ಯ ಮಾಡಿದೆ.