News Karnataka Kannada
Wednesday, April 24 2024
Cricket
ದೆಹಲಿ

ಕೇಜ್ರಿವಾಲ್‌ ಅಬಕಾರಿ ನೀತಿ ಹಗರಣದ ವೇಳೆ ಬಳಸುತ್ತಿದ್ದ ಮೊಬೈಲ್ ನಾಪತ್ತೆ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ಉದ್ದೇಶಿತ ಅಬಕಾರಿ ನೀತಿ ಹಗರಣದ ವೇಳೆ ಬಳಕೆ ಮಾಡುತ್ತಿದ್ದ ಮೊಬೈಲ್‌ ನಾಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ.
Photo Credit : NewsKarnataka

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಉದ್ದೇಶಿತ ಅಬಕಾರಿ ನೀತಿ ಹಗರಣದ ವೇಳೆ ಬಳಕೆ ಮಾಡುತ್ತಿದ್ದ ಮೊಬೈಲ್‌ ನಾಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿರುವುದಾಗಿ  ಮಾಹಿತಿ ತಿಳಿದು ಬಂದಿದೆ.

ಕೇಜ್ರಿವಾಲ್‌ ಅವರನ್ನು ಪ್ರಶ್ನಿಸಿದರೆ, ಮೊಬೈಲ್‌ ಎಲ್ಲಿದೆ ಎಂಬುದು ಗೊತ್ತಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಇ.ಡಿ ಮೂಲಗಳ ಪ್ರಕಾರ, ನಾಪತ್ತೆಯಾಗಿರುವ ಮೊಬೈಲ್‌ನಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಇರಬಹುದು. ಇದು ಈವರೆಗೆ ಕಾಣೆಯಾದ 171ನೇ ಸಾಧನವಾಗಿದೆ. ಪತ್ತೆಯಾಗಿರುವ 17 ಮೊಬೈಲ್‌ಗಳಿಂದ ಮಾಹಿತಿ ಕಲೆಹಾಕಿದ ನಂತರ, ಇ.ಡಿ ತನಿಖೆ ವೇಗ ಪಡೆದಿದೆ. ಇವುಗಳಿಂದ ಲಭ್ಯವಾದ ಮಾಹಿತಿ ಆಧರಿಸಿ, ಮನೀಶ್‌ ಸಿಸೋಡಿಯಾ ಅವರ ಹೆಸರನ್ನು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.

ದಾಖಲೆ ನಾಶ ಮಾಡುವ ಸಲುವಾಗಿ, ನಾಪತ್ತೆಯಾಗಿರುವ ಮೊಬೈಲ್‌ಗಳನ್ನೂ ನಾಶ ಮಾಡಿರುವ ಸಾಧ್ಯತೆ ಇದೆ ಎಂದು ತನಿಖಾಧಿಖಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು