News Karnataka Kannada
Monday, May 06 2024
ದೆಹಲಿ

ಲೋಗೋ, ವಿನ್ಯಾಸ ಬದಲಾವಣೆ ನಂತರ ಏರ್ ಇಂಡಿಯಾ ಹೊಸ ಲುಕ್‌ ರಿಲೀಸ್‌

Air India launches new look after logo, design change
Photo Credit : Twitter

ದೆಹಲಿ: ಲೋಗೋ ಮತ್ತು ವಿನ್ಯಾಸ ಬದಲಾವಣೆ ನಂತರ ಏರ್‌ ಇಂಡಿಯಾ ತನ್ನ ಹೊಸ ಲುಕ್‌ ಅನ್ನು ರಿಲೀಸ್‌ ಮಾಡಿದೆ. ಹೌದು. . ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ತನ್ನ ಹೊಸ ಎ350 ವಿಮಾನಗಳ ಮೊದಲ ನೋಟವನ್ನು ಹಂಚಿಕೊಂಡಿದೆ.

ಹೊಸ ವಿಮಾನಗಳಿಗೆ ಪೇಂಟ್‌ ಕೆಲಸವೂ ಮುಗಿದಿದ್ದು, ಹೊಸದಾಗಿ ಬಣ್ಣ ಬಳಿದಿರುವ ವಿಮಾನಗಳು ಈ ಚಳಿಗಾಲದಲ್ಲಿ ಭಾರತಕ್ಕೆ ಆಗಮಿಸಲಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

“ಟೌಲೌಸ್‌ನಲ್ಲಿರುವ ಪೇಂಟ್ ಶಾಪ್‌ನಲ್ಲಿ ನಮ್ಮ ಹೊಸ ಲೈವರಿಯಲ್ಲಿ A350ಯ ಮೊದಲ ನೋಟ ಇಲ್ಲಿದೆ. ನಮ್ಮ A350 ಗಳು ಈ ಚಳಿಗಾಲದಲ್ಲಿ ಮನೆಗೆ ಬರಲು ಪ್ರಾರಂಭಿಸುತ್ತವೆ” ಎಂದು ಏರ್ ಇಂಡಿಯಾ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ತಿಳಿಸಿದೆ.

ತನ್ನ ಎಲ್ಲ ವಿಮಾನಗಳಿಗೆ ಹೊಸ ಲುಕ್‌ ನೀಡಲು ಏರ್‌ ಇಂಡಿಯಾ 400 ಮಿಲಿಯನ್‌ ಡಾಲರ್‌ ಖರ್ಚು ಮಾಡುತ್ತಿದೆ. ತನ್ನ ಹೊಸ ಲೋಗೋ, ದಿ ವಿಸ್ಟಾ, ಗೋಲ್ಡನ್‌ ವಿಂಡೋ ಫ್ರೇಮ್‌ ಶಿಖರದಿಂದ ಪ್ರೇರಿತವಾಗಿದೆ. 2025 ರ ವೇಳೆಗೆ ಎಲ್ಲಾ ಏರ್ ಇಂಡಿಯಾ ವಿಮಾನಗಳು ಹೊಸ ಲೋಗೋವನ್ನು ಹೊಂದಿರುತ್ತವೆ ಎಂದು ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು